ಹುಲಿ ಇಂದ ಸಿಂಹ ನೆನೆದ ಮಂಜು!
- IndiaGlitz, [Saturday,November 09 2013]
ಅಂತಹ ಒಂದು ಕ್ಷಣ 34 ಸಿನೆಮಾಗಳ ನಿರ್ಮಾಣ ಮಾಡಿದ ಕೆ ಮಂಜು ಅವರಿಗೆ ಬಂದಿದೆ. ಅವರ ರಾಜ ಹುಲಿ ಬಾರಿ ಗಳಿಕೆಯ ಸಂದರ್ಭದಲ್ಲಿ.
ನಮ್ಮ ಬಾಸ್ ಇಲ್ಲದ ಕ್ಷಣದಲ್ಲಿ ಕಾಸ್! ಅವರು ನನ್ನ ಈ ರಾಜ ಹುಲಿ ಗೆಲುವು ನೋಡಿದ್ದರೆ ಮೊದಲು ಖುಷಿ ಪಡುತ್ತಿದ್ದರು. ಇಂತಹ ನೆನೆಪು ಇದ್ದರೆ ಸಾಕಲ್ಲವೇ ಸ್ನೇಹಿತರೇ ಎಂದು ಕೆ ಮಂಜು ಅವರು ಹೇಳಿಕೊಳ್ಳುವಾಗ ಡಾಕ್ಟರ್ ವಿಷ್ಣುವರ್ಧನ ಅವರ ಸಂಪಾದನೆ ಬೆಳಕಿಗೆ ಬಂದಿದ್ದು.
ಸತ್ತು ಬದುಕಿರುವವರ ಸಾಲಿನಲ್ಲಿ ಡಾಕ್ಟರ್ ವಿಷ್ಣುವರ್ಧನ ಅವರು ಸಹ ಒಬ್ಬರು ಅಂದರೆ ಅತಿಶಯೋಕ್ತಿ ಅಲ್ಲ. ಕೆ ಮಂಜು ಅವರು ಡಾಕ್ಟರ್ ವಿಷ್ಣುವರ್ಧನ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕು ಎಂದು ಮಾತಾಡ್ ಮಾತಾಡ್ ಮಲ್ಲಿಗೆ ಸಿನೆಮಾ ಕೈಗೆತ್ತಿಕೊಂಡು ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಸಿನೆಮಾ ಮಾಡಿದರು. ಆ ಸಿನೆಮಾಗೆ ಗಾಂಧೀವಾದಿ ಅಹಿಂಸಾ ತತ್ವದ ಪ್ರತಿಪಾದನೆಯ ಗತ್ತು ಸಹ ಇತ್ತು. ಆ ಸಿನೆಮಕ್ಕೆ ಮೂರನೇ ಅತ್ಯುತ್ತಮ ರಾಜ್ಯ ಪ್ರಶಸ್ತಿ ಬಂದದ್ದು ಅಂದಿನ ದಿನಗಳಲ್ಲಿ ಡಾಕ್ಟರ್ ವಿಷ್ಣುವರ್ಧನ ಅವರಿಗೆ ಕೊಂಚ ಬೇಜಾರು ಆಗಿತ್ತು.
ನಿರ್ಮಾಪಕ ಕೆ ಮಂಜು ಅವರು ಅಂದೆ ಅವರ ಸಿನೆಮಕ್ಕೆ ಸರಿಯಾದ ಸ್ಥಾನ ಮಾನ ಸಿಗಲಿಲ್ಲವೆಂದು ಹೋರಾಡುವ ತವಕದಲ್ಲಿ ಇದ್ದರು. ಆ ಹೋರಾಟ ಚೀರಾಟ ಏನು ಬೇಡ ಮಂಜು ಅಂದು ಬಾಯಿಗೆ ಬೀಗ ಹಾಕಿಸಿದವರು ಡಾಕ್ಟರ್ ವಿಷ್ಣುವರ್ಧನ ಅವರು. ನಮ್ಮ ನಮ್ಮಲ್ಲಿ ಇಂತಹ ವ್ಯಾಜ್ಯಗಳು ಬೇಕಾಗಿಲ್ಲ ಅಂದು ಚಿತ್ರದ ಹೊರಗೂ ಶಾಂತಿ ಮಂತ್ರವನ್ನು ಬಿತ್ತಿದವರು ಆ 'ಸಿಂಹ'.
ಇತ್ತೀಚಿಗೆ ಕೋರ್ಟಿಗೆ ಹೋಗಿ ರಾಜ್ಯ ಪ್ರಶಸ್ತಿಗೆ ಧಕ್ಕೆ ತಂದವರು ಡಾಕ್ಟರ್ ವಿಷ್ಣುವರ್ಧನ ಅವರು ಹೇಳಿದನ್ನು ಸ್ಮರಿಸಿಕೊಳ್ಳಬಹುದಿತ್ತು.
ಕೆ ಮಂಜು ಮಾತ್ರ ಸಿಂಹ ಅವರನ್ನು ಮರೆಯಲು ಸಾಧ್ಯವೇ ಇಲ್ಲ ಅಂತಾರೆ. ಈಗಲೂ ಅವರ 50 ನೇ ಸಿನೆಮಾ ಆನಿಮೇಷನ್ ತಂತ್ರಜ್ಞಾನದಲ್ಲಿ ರಾಷ್ಟ್ರ ಮಟ್ಟದಲ್ಲಿ ತರುವ ಯೋಚನೆ ಅನ್ನು ಇಟ್ಟುಕೊಂಡಿದ್ದಾರೆ.