ಸುಹಾಸಿನಿ-ಸುಹಾಸಿನಿ ಮನೋಜ್ಞ ಅಭಿನಯ
Send us your feedback to audioarticles@vaarta.com
ಇದು ಕುಮಾರಿ ಸುಹಾಸಿನಿ ಹಾಗೂ ಪ್ರಖ್ಯಾತ ತಾರೆ ಸುಹಾಸಿನಿ ಅವರ ಮನೋಜ್ಞ ಅಭಿನಯದ ಕ್ಷಣ.ನಾನಿ ಚಿತ್ರಕ್ಕೆ ಹಿರಿಯ ತಾರೆ ಸುಹಾಸಿನಿ ಅವರು ಅಭಿನಯಿಸಿದ ನಂತರ ಕೆಲವು ನಿಮಿಷಗಳ ಕಾಲ ಮೌನ ತಾಳಿ ಕುಳಿತು ಬಿಟ್ಟರು.
ಅಲ್ಲಿದ್ದ ಎಲ್ಲರಿಗೂ ಆತಂಕ. ಆನಂತರ ವಿಚಾರಿಸಿದಾಗ ಸುಹಾಸಿನಿ ಆವರರು ಅಭಿನಯಿಸಿದ ಸಂಧರ್ಭ ಅತಿ ಭಾವನಾತ್ಮಕ ಆಗಿತ್ತು ಎಂದು ಮೌನಕ್ಕೆ ಕಾರಣ ತಿಳಿಸಿದರು. ಟೆಸ್ಟ್ ಟ್ಯೂಬು ಮಗಳ ಪಾತ್ರದಲ್ಲಿ ಕುಮಾರಿ ಸುಹಾಸಿನಿ ಸಹ ಅಚ್ಚು ಕಟ್ಟಾಗಿ ಅಭಿನಯಿಸಿ ಪ್ರಶಂಸೆ ಪಡೆದಳು. ಈ ಸುಹಾಸಿನಿ-ಸುಹಾಸಿನಿ ಜೋಡಿ ನಾನಿ ಸಿನಿಮಾದ ಹಲವು ಮುಖ್ಯಾಂಶಗಳಲ್ಲಿ ಬಹು ಮುಖ್ಯವಾದ ಅಂಗ.
1997 ರಲ್ಲಿ ನಡೆದ ಒಂದು ಸತ್ಯ ಘಟನೆ ಆಧಾರಿತ ಕನ್ನಡ ಸಿನಿಮಾ ನಾನಿ ತುಳಸಿ ಫಿಲ್ಮ್ಸ್ ಅಡಿಯಲ್ಲಿ ತಾಯರಗುತ್ತಿರುವ ಐದನೇ ಚಿತ್ರ. ರಾಘವೇಂದ್ರ ಗೊಲ್ಲಹಳ್ಳಿ ಅವರ ಪ್ರಥಮ ಚಿತ್ರ,ನಿರ್ಮಾಪಕ ರಮೇಶ್ ಕುಮಾರ್ ಜೈನ್ ಅವರ ಕಥೆ ಒಳಗೊಂಡಿದೆ. ಗುಂಡುಲ್ಪೇಟ್ ಸುರೇಶ್ ಅವರ ಛಾಯಾಗ್ರಹಕ,ನುರಿತ ಬರೆಹಗಾರ ಬಿ ಎ ಮಧು ಅವರ ಸಂಭಾಷಣೆ ಇರುವ ಚಿತ್ರ ನಾನಿ ಗುಜರಾತ್ ರಾಜ್ಯದಲ್ಲೂ ಚಿತ್ರೀಕರಣ ಮಾಡಲಿದೆ. ತ್ಯಾಗರಾಜ್ ಅವರ ಸಂಗೀತ ನಿರ್ದೇಶನ ಇದೆ.
ನಾನಿ ಆಗಿ ಕುಮಾರಿ ಸುಹಾಸಿನಿ,ಅವಳ ಹೆತ್ತವರಾಗಿ ಸುಹಾಸಿನಿ ಮಣಿರತ್ನಂ ಹಾಗೂ ಜೈ ಜಗದೀಶ್,ಮನಿಷ್,ಪ್ರಿಯಾಂಕ ರಾವ್ ಯುವ ಜೋಡಿಗಳಾಗಿ ಇದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments