ಸಿನೆಮಾ ಅಮ್ಮ - ಜಗ್ಗೇಶ್
Send us your feedback to audioarticles@vaarta.com
ಸಿನೆ ಮಾ! ಸಿನೆಮಾ ಎಂಬ ಪದದಲ್ಲೇ ಮಾ ಇದೆ. ಜಗ್ಗೇಶ್ ಎಂಬ ಅಸಾಧಾರಣ ಪ್ರತಿಭೆ, ನವರಸ ನಾಯಕ ಅವರಿಗೆ ಸಿನೆಮಾ ಅಮ್ಮ ಇದ್ದ ಹಾಗೆ. ಅದಕ್ಕೆ ಅವರು ಅವರ ತಾಯಿಯ ಭಾವಚಿತ್ರವನ್ನು ತೋಳಮೇಲೆ ಹಚ್ಚೆ ಹಾಕಿಸಿ ಕೊಂಡಿದ್ದಾರೆ. ಹೆಂಡತಿ ಬಂದರೂ ಅಮ್ಮನನ್ನು ಮರೆಯುವ ಜಾಯಿಮಾನ ನನ್ನದಲ್ಲ ಎನ್ನುವ ಜಗ್ಗೇಶ್ ಅವರು ಸಿನೆಮಾದ ಸಲುವಾಗಿ ಬೆಳಗಾವಿಯಲ್ಲಿ ನಡೆಯುವ ಆದಿವೇಶವಕ್ಕೆ ರಜೆ ತಗೆದುಕೊಂಡಿದ್ದಾರೆ. ಅದು ಸಿನೆಮಾ ಅಮ್ಮನ ಸಲುವಾಗಿ. ಜಗ್ಗೇಶ್ ಅಭಿನಯದ ಕೂಲ್ ಗಣೇಶ್ ಬಿಡುಗಡೆ ಆಗುತ್ತಿರುವುದರಿಂದ ಅವರು ಪತ್ರ ಮುಖೇನ ಅನುಪಸ್ಥಿತಿಯನ್ನು ಹೇಳಿಕೊಂಡಿದ್ದಾರೆ.
ನನ್ನ ಜೀವನದಲ್ಲಿ 20 ರೂಪಾಯಿ ಇದ್ದಾಗಲೂ ಹೇಗಿದ್ದೆನೋ ಹಾಗೆ ಇರುವೆ. ಡವ್ ಮಾಡೋನಲ್ಲ. ಅದು ಮೇಂಟೆನ್ ಮಾಡಬೇಕಾದ ಸ್ಥಳದಲ್ಲಿ ಮಾತ್ರ. ಬೇರೆ ಅವರು ಹೇಗೋ ನಂಗೊತಿಲ್ಲ. ತಾತ್ಸಾರ ಸಿನೆಮಾಗೆ ಮಾಡಲಾರೆ. ಈ ಸಿನೆಮದಿಂದಲೇ ಎಲ್ಲ ಪಡೆದಿರುವುದು.ಏಳೆಳು ಜನ್ಮಕ್ಕು ಈ ಸಿನೆಮಾ ದಲ್ಲಿ ಸಿಕ್ಕುವ ಅವಕಾಶ ಎಷ್ಟೋ ಜನಕ್ಕೆ ಸಿಗಲ್ಲ. ತಾಯಿ ಶಾರದೆ ಕರೆದಾಗ ನಾವು ತಲೆ ಬಾಗಿ ಪಡೆಯಬೇಕು. ಮಾಧ್ಯಮವು ನನ್ನನ್ನು ಅಂದಿನಿಂದ ಆಶೀರ್ವಾದ ಮಾಡುತ್ತಾ ಬಂದಿದೆ. ಇಂದು ಅವರ ಆಶೀರ್ವಾದ ಸಿನೆಮಾ ಗೆಲ್ಲಲು ಮುಖ್ಯ ಎಂದೇ ಜಗ್ಗೇಶ್ 30 ವರ್ಷಗಳಿಂದಲೂ ನಂಬಿದ್ದಾರೆ.
ಜಗ್ಗೇಶ್ ಅವರು ಹಾಡಿರುವ ಸಾಲು ಬ್ಯೂಟಿಫುಲ್ ಹೆಣ್ಣು ಕತ್ಕೋಂಡ್ ರೇ ಬಾಯಿಗೆ ಮಣ್ಣೆ....ಅವರ ಮನೆಯಲ್ಲಿ ಹೆಂಡತಿ ಇಂದ ಏನು ಬಯ್ಗುಳ ಆಗಿಲ್ಲವಂತೆ. ನಾನು ನನ್ನ ಹೆಂಡತಿಗೆ 90 ಪರ್ಸೆಂಟ್ ಪ್ರಮಾಣಿಕ ಹಾಗಾಗಿ ತೊಂದರೆ ಇಲ್ಲ ಎನ್ನುವರು. ಜಗ್ಗೇಶ್ ಅವರಿಗೆ ಕೂಲ್ ಗಣೇಶ ಬಿಡುಗಡೆ ಆಗುವುದು ಮುಖ್ಯ. ಅವರನ್ನು ನಂಬಿ ಹೊಸ ನಿರ್ಮಾಪಕರು ಬಂದಿದ್ದಾರೆ. ನಾನು ನಂಬಿಕೆ ಇಟ್ಟವರಿಗೆ ದಾಸ. ಈಗಂತೂ ನಿರ್ಮಾಪಕರಿಂದ ಕಮಿಷನ್ ಪಡೆಯೋರು ಕ್ಯಾಚ್ ಹಾಕೋರೆ ಜಾಸ್ತಿ, ನಿರ್ಮಾಪಕ ಎರಡು ಬಿಳಿ ಒಂದು ಕೆಂಪು ಹಣೆಯಮೇಲೆ ಗ್ಯಾರಂಟಿ.... ಎಂದು ಅವರ ದಾಟಿಯಲ್ಲೇ ಜಗ್ಗೇಶ್ ಚಾಟಿ ಬಿಸುತ್ತಾರೆ.
Follow us on Google News and stay updated with the latest!
-
Contact at support@indiaglitz.com
Comments