ಸಿಗರೇಟ್ ಆರೋಗ್ಯದತ್ತ ಗಮನ
- IndiaGlitz, [Friday,August 22 2014]
ಕಳೆದ ಎರಡು ಸಿನೆಮಗಳಿಂದ ಜನಪ್ರಿಯತೆ ಪಡೆದ ನಿರ್ದೇಶಕ ಲಕ್ಕಿ ಶಂಕರ್ ಅವರು ಸಿಗರೇಟ್ ಸಿನೆಮಕ್ಕೆ ಅನೇಕ ವಿಶೇಷ ಬಗೆಯ ಪ್ರಯತ್ನ ಮಾಡಿರುವುದು ತಿಳಿದೇ ಇದೆ.
ಈಗ ಧ್ವನಿ ಸುರುಳಿ ಬಿಡುಗಡೆಗೂ ಅವರು ಒಂದು ಸಂಕಲ್ಪ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಆರೋಗ್ಯ ಮಂತ್ರಿಗಳಿಂದ ಧ್ವನಿ ಸುರುಳಿ ಬಿಡುಗಡೆ ಮಾಡುವುದು. ಅದೇ ಅಲ್ಲದೆ ಈ ಚಿತ್ರದಲ್ಲಿ ಬರುವ ಒಂದು ಹಾಡಿನಲ್ಲಿ 16 ಭಾಷೆಗಳ ವಿವಿಧ ಪದ ತುಂಬಿರುವುದರಿಂದ ಅನೇಕ ಭಾಷಾ ತಜ್ಞರನ್ನು ಕರೆಸುವ ಯೋಚನೆಯೂ ನಿರ್ದೇಶಕರಿಗಿದೆ.
ಸಿಗರೇಟ್ ಸಿನೆಮಾ ತಂಡದಿಂದ ನ ಮೋ ಅರ್ಥಾತ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಒಂದು ಅಭಿನಂದನಾ ಗೀತೆಯನ್ನು ಸಿದ್ದಾಮಾಡಲಾಗಿದೆ.ಈ ಹಿಂದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತಾಗಿ ಟೀ ಬಗ್ಗೆ ಹಾಡು ರಚಿಸಲಾಗಿತ್ತು.
ಕನ್ನಡ ಸಿನೆಮಾ ರಂಗ ಶೀಘ್ರವಾಗಿ ದೇಶದ ನೂತನ ಪ್ರಧಾನ ಮಂತ್ರಿಗೆ ಅಭಿನಂದನೆ ಹೇಳುತ್ತಿರುವುದು ಮೊದಲು. ನಿರ್ದೇಶಕ ಲಕ್ಕಿ ಶಂಕರ್ ಅವರೇ ರಚಿಸಿರುವ ಸ್ವಾರ್ಥ ವೇಸ,ಸರ್ವ ನಾಶ,ರಾಹು ದೋಷ ಎಲ್ಲ ಮೋಸ,ಕ್ರೇಜ್ ಇಂದ ಯಾಕೆ ಗೂಸಾ,ಮೋದಿ ಒಬ್ರೆ ಇಲ್ಲಿ ಭಾಷಾ,ಮೋದಿ ಸೂಪರ್ ಹೊಡೆದ್ರು ಬಂಪರ್,ಮೋದಿ ಸೂಪರ್ ಆದ್ರೂ ಲೀಡರ್.... ಎಂಬ ಗೀತೆಯನ್ನು ಸಂಗೀತ ನಿರ್ದೇಶಕ ಕೆ ಎಂ ಇಂದ್ರ ಹಾಗೂ ಲಕ್ಕಿ ಶಂಕರ್ ಅವರೇ ಹಾಡಿದ್ದಾರೆ.
ಸಿಗರೇಟ್ ಚಿತ್ರದಲ್ಲಿ ಎಲ್ಲ ಕಲಾವಿದರು ಸೇರಿ ಈ ನರೇಂದ್ರ ಮೋದಿ ಅಭಿನಂದನಾ ಗೀತೆಯಲ್ಲಿ ಪಾಲ್ಗೊಳ್ಳುವವರು ಎಂದು ನಿರ್ದೇಶಕ ಲಕ್ಕಿ ಶಂಕರ್ ತಿಳಿಸಿದ್ದಾರೆ.
ಶಿವ ಶಂಕರ್ ಫಿಲ್ಮ್ ಫ್ಯಾಕ್ಟರಿ ಅಲ್ಲಿ ತಾಯರುಗುತ್ತಿರುವ ಸಿಗರೇಟ್ ಕನ್ನಡ ಚಿತ್ರದಲ್ಲಿ ಹಾಸ್ಯ,ರೊಮಾನ್ಸ್,ಮನ ತಟ್ಟುವ ಸನ್ನಿವೇಶಗಳನ್ನು ನಿರ್ದೇಶಕರು ಪೇರಿಸಿದ್ದಾರೆ. ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್,ಶಿರ್ಕಿ ಅಪಾರ್ಟ್ಮೆಂಟ್ ಕೆಂಗೇರಿ,ಸದಾಶಿವನಗń