ಸಚ್ಚಿನ್ ತೆರೆಗೆ ಸಿದ್ದ
Send us your feedback to audioarticles@vaarta.com
ಬಿ.ಎನ್.ಗಂಗಾಧರ್ ಅವರು ನಿರ್ಮಿಸಿರುವ ಸಚಿನ್ ... ತೆಂಡುಲ್ಕರ್ ಅಲ್ಲ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮಕ್ಕಳ ಚಿತ್ರವೆಂದು ಪರಿಗಣಿಸಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎಸ್.ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರಸಾದ್ ಬಾಬು ಅವರ ಛಾಯಾಗ್ರಹಣವಿದೆ. ಶಿವು ಸಂಕಲನ, ರಾಜೇಶ್ ರಾಮನಾಥ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಎಸ್.ಮೋಹನ್, ನಾಗೇಂದ್ರಪ್ರಸಾದ್, ಆನಂದ್ ಬರೆದಿದ್ದಾರೆ.
ಖ್ಯಾತ ನಟಿ ಸುಹಾಸಿನಿ, ಸುಧಾರಾಣಿ, ಪದ್ಮವಾಸಂತಿ, ಮಾಸ್ಟರ್ ಸ್ನೇಹಿತ್, ಶೈಲಜಾಜೋಶಿ, ಶ್ರೀನಿವಾಸಪ್ರಭು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹೆಸರಾಂತ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.
Follow us on Google News and stay updated with the latest!
-
Contact at support@indiaglitz.com
Comments