ಶಿವ ಶಿವ ಪರಮಶಿವ
Send us your feedback to audioarticles@vaarta.com
ಶಿವರಾಜಕುಮಾರ್ ಶಿವ ಆದರೆ ವಿ ರವಿಚಂದ್ರನ್ ಪರಮಶಿವ. ರೀಮೇಕ್ ಸಿನೆಮಾದಲ್ಲಿ ವಿ ರವಿಚಂದ್ರನ್ ಇದ್ದರೆ ಶಿವರಾಜಕುಮಾರ್ ಸ್ವಮೇಕ್ ಸಾಕು ಎನ್ನುತ್ತಾರೆ.
ಕನ್ನಡದ ಕನಸುಗಾರ ವಿ ರವಿಚಂದ್ರನ್ ದ್ವಿಪಾತ್ರದಲ್ಲಿ ಅಭಿನಯಿಸಿರುವ ಪರಮಶಿವ ಕನ್ನಡ ಸಿನೆಮಾ ಈ ವಾರ ತೆರೆಕಾಣುತ್ತಿದೆ. ಸಿ ಎಫ್ ಎಂ ಬ್ಯಾನ್ನರ್ ಅಡಿಯಲ್ಲಿ ಅಣಜಿ ನಾಗರಾಜ್ ಅವರ ನಿರ್ಮಾಣದ ಈ ಬಹುತಾರಗಣದ ಪರಮ ಶಿವ ಚಿತ್ರವನ್ನು ತೂಗುದೀಪ ಹಂಚಿಕೆ ಸಂಸ್ಥೆ ಕರ್ನಾಟದಾದ್ಯಂತ ಬಿಡುಗಡೆ ಮಾಡುತ್ತಿದೆ. ಬಸವರಾಜ್ ಮಂಚಯ್ಯ ಅವರ ನಿರ್ಮಾಣದ ಸಹಕಾರ ಈ ಚಿತ್ರಕ್ಕಿದೆ. ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕ ಮಹೇಶ್ ಬಾಬು ಅವರು ಚಿತ್ರದ ನಿರ್ದೇಶಕರು.
ಪರಮಶಿವ ಕನ್ನಡ ಸಿನೆಮಾ 2001 ರಲ್ಲಿ ತಮಿಳಿನಲ್ಲಿ ಬಿಡುಗಡೆ ಆದ ಸಮುದ್ರಂ ಚಿತ್ರದ ಕನ್ನಡ ಅವತರಿಣಿಕೆ. ರವಿಚಂದ್ರನ್ ಜೊತೆಯಾಗಿ ಸಾಕ್ಷಿ ಶಿವಾನಂದ್,ತಂಗಿಯಾಗಿ ಶರಣ್ಯ,ವಿಜಯ ರಾಘವೇಂದ್ರ,ಯಶಸ್,ರೇಖ,ಸಾಧು ಕೋಕಿಲ,ರಮೇಶ್ ಭಟ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ,ಅಣಜಿ ನಾಗರಾಜ್ ಅವರ ಛಾಯಾಗ್ರಹಣ,ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ,ವಿನೋದ್ ಮನೋಹರ್ ಅವರ ಸಂಕಲನ,ಕೆ ಡಿ ವೆಂಕಟೇಶ್ ಹಾಗೂ ಪಳನಿರಾಜ್ ಅವರ ಸಾಹಸ,ಎಂ ಎಸ್ ರಮೇಶ್ ಅವರ ಸಂಭಾಷಣೆ,ಹರ್ಷ ಅವರ ನೃತ್ಯ ನಿರ್ದೇಶನ ಒದಗಿಸಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments