ವೀಕೆಂಡ್ ವಿತ್ ರಮೇಶ್
Send us your feedback to audioarticles@vaarta.com
ರಮೇಶ್ ಇದ್ದ ಕಡೆ ಯಶಸ್ಸು ಗ್ಯಾರಂಟಿ. ಅದು ಬಾಕ್ಸ್ ಆಫೀಸು ಯಶಸ್ಸು ಅವರ ಸಿನೆಮಗಳಿಂದ ಎಲ್ಲವೂ ಆಗಿರದೆ ಇರಬಹುದು ಆದರೆ ಅವರ ಪುಟ್ಟ ಪರದೆಯಲ್ಲಿ ಪ್ರಜ್ವಲಿಸುವ ತಾರೆ.
ಕಿರುತೆರೆ ವಾಹಿನಿಗಳಲ್ಲಿ ಇತ್ತೀಚೆಗೆ ರಿಯಾಲಿಟಿ ಷೋಗಳದ್ದೇ ಕಾರುಬಾರು,ಹೊಸ ಹೊಸ ರೀತಿಯ ರಿಯಾಲಿಟಿ ಷೋಗಳನ್ನು ಆರಂಭಿಸಿ ಛಾನಲ್ ಗಳು ತನ್ನ ಟಿ.ಆರ್.ಪಿ.ಯನ್ನು ಸ್ಪರ್ಧಾತ್ಮಕವಾಗಿ ಹೆಚ್ಚಿಸಿಕೊಳ್ಳುತ್ತಿವೆ. ಅದರಲ್ಲೂ ಜೀ ಕನ್ನಡವಾಹಿನಿ ತಾನು ವೀಕ್ಷಕರಿಗೆ ತೋರಿಸುವ ಪ್ರತಿಯೊಂದು ಕಾರ್ಯಕ್ರಮವೂ ವಿಭಿನ್ನವಾಗಿ ಮೂಡಿಬರಲೆಂದು ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಇಂಥ ಪ್ರಯತ್ನಗಳಲ್ಲೊಂದು ವೀಕೆಂಡ್ ವಿಥ್ ರಮೇಶ್. ಕಳೆದ ಆಗಷ್ಟ್ ೨ ರಿಂದ ಆರಂಭವಾದ ಈ ರಿಯಾಲಿಟಿ ಷೋನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಕರೆತಂದು ಅವರು ನಡೆದು ಬಂದ ಹಾದಿಯುನ್ನೊಮ್ಮೆ ಹಿಂದಿರುಗಿ ನೋಡುವಂತೆ ಮಾಡುವುದು. ಅವರ ಹಾದಿಯಲ್ಲಿ ಜೊತೆಗಿದ್ದವರೆನ್ನೆಲ್ಲ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿ ತೋರಿಸುವುದು ಈ ಕಾರ್ಯಕ್ರಮದ ಉದ್ದೇಶ.
ಈ ಕಾರ್ಯಕ್ರಮವನ್ನು ನಟ ರಮೇಶ್ ಅರವಿಂದ ಅವರು ಅಚ್ಚುಕಟ್ಟಾಗಿ ನಿರೂಪಿಸಿಕೊಡುತ್ತಿದ್ದು ಜೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ ೯ ಗಂಟೆಯಿಂದ ೧೦ ಗಂಟೆಯವರೆಗೆ ಪ್ರಸಾರವಾಗುತ್ತಿದೆ. ನಟ ಪುನೀತ್ ರಾಜ್ ಕುಮಾರ್ ರಿಂದ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್,ಯಶ್,ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಅಲ್ಲದೆ ಪತ್ರಕರ್ತರಾದ ರಂಗನಾಥ್,ಒಬ್ಬ ಸಾಮಾನ್ಯ ವ್ಯಕ್ತಿ ಹಾಗೂ ಅಂಗವಿಕಲನಾದ ಅಶ್ವಿನ್ ನಂಥವರೂ ಬಂದು ಹೋಗಿದ್ದಾರೆ.
ಕಳೆದ ಭಾನುವಾರ ನಟ ಶಿವರಾಜ್ ಕುಮಾರ್ ಅವರ ಕಾರ್ಯಕ್ರಮದ ಶೂಟಿಂಗ್ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಚಿತ್ರೀಕರಣ ವೀಕ್ಷಣೆಗೆ ಬ
Follow us on Google News and stay updated with the latest!
-
Contact at support@indiaglitz.com
Comments