ರಾಗಿಣಿ ದ್ವಿಭಾಷಾ ಚಿತ್ರ
Send us your feedback to audioarticles@vaarta.com
ಮಾಸ್ ಮಹಾರಾಣಿ ರಾಗಿಣಿ ದ್ವಿವೇದಿ ಈ ವರ್ಷದ ದೀಪಾವಳಿ ಹಬ್ಬವನ್ನು ಮಲೈಶಿಯ ದೇಶದಲ್ಲಿ ಅಚ್ಚರಿಸಿಕೊಳ್ಳುತ್ತಿದ್ದಾರೆ. ಅವರ ಸಂಭ್ರಮ ಹಬ್ಬಕ್ಕೆ ಹೊಸ ಸಿನೆಮಾ ಬಿಡುಗಡೆ ಇಂದ. ಅದರಲ್ಲೂ ಎರಡು ಭಾಷೆಗಳಲ್ಲಿ ಏಕ ಕಾಲಕ್ಕೆ.
ರಾಗಿಣಿ ಅವರು ಚಿತ್ರ ಸೆಟ್ಟೇರುತ್ತಿರುವ ಚಿತ್ರ ಒಂದು ಕಡೆ ಆದರೆ ಅಂದೆ ಅವರ ನಮಸ್ತೆ ಮೇಡಮ್ ಸಿನೆಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿದೆ. ಒಟ್ಟಿನಲ್ಲಿ ದ್ವಿವೇದಿ ದ್ವಿಭಾಷಾ ಚಿತ್ರ ಅವರನ್ನು ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದೆ.
ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಅಭಿನಯದ ಊಜ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮಲೈಷಿಯಾ ದೇಶದಲ್ಲಿ ಇದೆ ತಿಂಗಳ 24ರಂದು ದೀಪಾವಳಿ ಹಬ್ಬದಂದು ಪ್ರಾರಂಭವಾಗಲಿದೆ. 30 ದಿವಸಗಳ ಕಾಲ ತಲಾ 15 ದಿವಸ ಕನ್ನಡ ಹಾಗೂ ತೆಲುಗು ಭಾಷೆಗೆ ಚಿತ್ರೀಕರಣ ಆಗಿ ತಾಯ್ನಾಡಿಗೆ ಮರಳಲಿದೆ. ರಾಗಿಣಿ ಅವರಿಗೆ ಇದೆ ಮೊದಲ ಬಾರಿಗೆ ಒಂದು ಹಾರರ್ ಸಿನೆಮಾ.
ಇದೊಂದು ಹರಾರ್ ಸಿನೆಮಾ ಎಂದು ನಿರ್ಮಾಪಕ ವಿಕ್ರಮ್ ರಾಜು ಅವರು ತಿಳಿಸಿದ್ದಾರೆ. ಈ ಚಿತ್ರದ ನಿರ್ದೇಶಕರು ರಾಜ್ ಕುಮಾರ್,ರವಿಕುಮಾರ್ ಅವರ ಛಾಯಾಗ್ರಹಣ,ಹರಿ ಅವರ ಸಂಗೀತ,ಎಸ್ ಬಿ ಶೇಖರ್ ಅವರ ಸಂಕಲನ ಇರುವ ಚಿತ್ರ ಅದ್ಧೂರಿಯಾಗಿ ನಿರ್ಮಾಣ ಆಗಲಿದ್ದು ತಾತ್ರಿಕ ಕೌಶಲ್ಯ ಸಹ ಪ್ರೇಕ್ಷಕನಿಗೆ ಮನರಂಜನೆ ನೀಡಲಿದೆ.
ರಾಗಿಣಿ ದ್ವಿವೇದಿ ಜೊತೆ ಮಾಧುರಿ ಇಟಗಿ,ಗಾಯತ್ರಿ ವೆಂಕಟಗಿರಿ,ಭರತ್,ಅವಿನಾಷ್,ರಾಜ ರವೀಂದ್ರ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ.
Follow us on Google News and stay updated with the latest!
Comments