close
Choose your channels

ರಣತಂತ್ರ ಹಿನ್ನೆಲೆ ಸಂಗೀತ

Thursday, September 18, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಬಿಗ್ ಬಾಸ್ ಖ್ಯಾತಿಯ ವಿಜಯ ರಾಘವೇಂದ್ರ ಹಾಗೂ ಚೆಲುವಿ ಹರಿಪ್ರಿಯಾ ಅವರ ಮೊತ್ತ ಮೊದಲ ಜೋಡಿಯ ಚಿತ್ರ ರಣತಂತ್ರ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಮಾಧ್ಯಮದ ಮುಂದೆ ಒಮ್ಮೆಯೂ ಬಾರದೇ ಹಿನ್ನಲೆ ಸಂಗೀತಕ್ಕೆ ಬಂದು ನಿಂತಿದೆ.

ಒಂದು ಸಿನೆಮಕ್ಕೆ 10 ರಿಂದ 15 ಬಾರಿ ಪ್ರಚಾರ ಗಿಟ್ಟಿಸಿಕೊಳ್ಳುವ ಭೂಪರೂ ಇರುವ ಈ ಸಂದರ್ಭದಲ್ಲಿ ಪ್ರಚಾರವೇ ಬೇಡ ಸಿನೆಮಾ ಪ್ರೇಕ್ಷಕನ ಮುಂದೆ ಬಂದರೆ ಅವನೇ ಮಹಾ ಪ್ರಭು ಎಂದು 6-5=2 ಅಂತ ಸಿನೆಮಗಳು ಗೆದ್ದು ಬೇರೆಯವರಿಗೆ ಮಾರ್ಗದರ್ಶನವಾಗಿದೆ. ಏನೇ ಆಗಲಿ ಹಣ ಹಾಕಿದ ನಿರ್ಮಾಪಕ ಗೆದ್ದರೆ ಸಾಕಲ್ಲವೇ. ಆದರೆ 6-5=2 ಅಂತಹ ಕನ್ನಡ ಸಿನೆಮಾ ಗೆದ್ದ ಮೇಲೆ ಮಾಧ್ಯಮದ ಮುಂದೆ ಬಂದು ಕೂತಿದ್ದು ಆಗಿದೆ.

ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣದ ರಣತಂತ್ರ ಚಿತ್ರಕ್ಕೆ ಇನ್ನೂ ಮಾಧ್ಯಮದ ಪ್ರಚಾರ ಕೇವಲ ಸಂಪರ್ಕ ಆದಿಕಾರಿಗಳಿಂದ ನಡೆಯುತ್ತಿದೆ. ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ಚಿತ್ರದ ಕಥೆ,ಚಿತ್ರಕಥೆ,ಸಂಭಾಷಣೆ ನಿರ್ದೇಶನ- ಆದಿರಾಂ,ಛಾಯಾಗ್ರಹಣ-ರಾಜೇಶ್ ಯಾದವ್,ಸಂಗೀತ-ಎಂ.ಕಾರ್ತಿಕ್,ಕಲೆ-ನಂಜುಂಡಸ್ವಾಮಿ,ಸಾಹಸ-ಮಾಸ್ ಮಾದ,ನೃತ್ಯ-ಕಲೈ-ರಾಧಿಕಾ,ಸಾಹಿತ್ಯ-ನಾಗೇಂದ್ರ ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್,ಕೋ-ಡೈರೆಕ್ಟರ್-ಭವಾನಿಶಂಕರ್,ನಿರ್ವಹಣೆ - ಹಾರ್ಟ್ ಬೀಟ್ ರಾಜು- ಮುರುಗದಾಸ್,ಕ್ಯೂಟ್ ಲವ್ ಹಾಟ್ ಥ್ರಿಲ್ಲರ್ ಕಥಾ ಚಿತ್ರವುಳ್ಳ ಈ ಚಿತ್ರದ ಕೋ-ಪ್ರೊಡ್ಯೂಸರ್ - ಕರ ರಮ್ಮಿರಾಜ್ ತಾರಾಗಣದಲ್ಲಿ ಚಿನ್ನಾರಿ ಮುತ್ತ ವಿಜಯ್,ಹರಿಪ್ರಿಯ,ಸತ್ಯಜಿತ್,ಭಜರಂಗಿ ಮಾದು,ಸಪ್ನೊಂಕಾ ರಾಣಿ ಐಶ್ವರ್ಯ,ಕುರಿ ರಂಗ,ಶಶಿಕಲಾ,ಸೋನಂ,ಭಾರತಿ,ಶೋಬಿನಾ,ಅ೦ಜಲಿ ಮುಂತಾದವರಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ,ಬೆಂಗಳೂರು,ಮೈಸೂರು,ಗೋವಾ ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ.

Follow us on Google News and stay updated with the latest!   

Comments

Welcome to IndiaGlitz comments! Please keep conversations courteous and relevant to the topic. To ensure productive and respectful discussions, you may see comments from our Community Managers, marked with an "IndiaGlitz Staff" label. For more details, refer to our community guidelines.
settings
Login to post comment
Cancel
Comment