ಯೋಗೀಶ್ ಸಿಲ್ವರ್ ಜೂಬಿಲೀ ಸಿನೆಮಾ!
Send us your feedback to audioarticles@vaarta.com
ಏಳು ವರ್ಷಗಳಲ್ಲಿ ಏಳುಬೀಳುಗಳನ್ನು ಕಂಡರೂ ಜನಪ್ರಿಯತೆ ಮಾಸಿಲ್ಲ ಈ ಯೋಗೀಶ್ ಎಂಬ ಚಿನಕುರುಳಿ ನಟನಿಗೆ. ಈಗ 25 ರಸಿನೆಮಾದ ಕಾಲವನ್ನು ಈ ಕಾಲಾಯ ತಸ್ಮೈ ನಮಹ ನಟ ಎದುರುಸಿತ್ತಿದ್ದಾನೆ. ಯೋಗೀಶ್ ಅವರು ಈಗ ಓಬಿರಾಯ. ಒಬೆರಾಯ್ ಆಗುವುದು ಅಂದರೆ ಅಂತಹ ಬಿಸಿನೆಸ್ ಮ್ಯಾನ್ ಆಗುವುದು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಅದರ ಓಬೀರಾಯ ಅಂತ ಶೀರ್ಷಿಕೆ ಯೋಗೀಶ್ ಅವರ 25ನೇ ಸಿನೆಮಾ. ಲೂಸ್ ಮಾದನಾಗಿ ದುನಿಯಾ ಇಂದ ಕಾಲಿಟ್ಟವರು ಯೋಗೀಶ್ ಒಂದು ಸಣ್ಣ ಪಾತ್ರದಿಂದಲೇ ಈ ಮಟ್ಟ ತಲುಪಿದ್ದಾರೆ.
ನಂದ ಲವ್ಸ್ ನಂದಿತಾ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕರಾದ ಯೋಗೀಶ್ ಅವರು ರಾವಣ, ಪುಂಡ, ಪ್ರೀತ್ಸೆ ಪ್ರೀತ್ಸೆ, ಯೋಗಿ, ಅಂಬಾರಿ, ದೇವದಾಸ್, ಹುಡುಗರು, ಧೂಳ್, ಸಿದ್ಲಿಂಗು, ಅಲೆಮಾರಿ, ಕಾಲಾಯ ತಸ್ಮೈ ನಮಹ, ಯಾರೇ ಕೂಗಾಡಲಿ, ಬಂಗಾರಿ, ಜಿಂಕೆ ಮರಿ, ಅಂಬರ, ಮತ್ತೆ ಸತ್ಯಾಗ್ರಹ, ಕಾಲಭೈರವ, ಝಾಂಡ ಹಾಗೂ ಇನ್ನಿತರ ಸಿನೆಮಗಳಲ್ಲಿ ಅಭಿನಯಿಸಿರುವ ರಾಜ್ಯ ಪ್ರಶಸ್ತಿ ವಿಜೇತ ನಟ. ಲೂಸ್ ಮಾದನಾಗಿ ಬಂದ ಯೋಗೀಶ್ ಡಾರ್ಲಿಂಗ್ ವರೆಗೂ 24 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿವೇಕಾನಂದ ಎಂಬುವರು ಈ ಚಿತ್ರದ ನಿರ್ದೇಶಕರು. ಅಲ್ಫಾ ಕ್ರಿಯೇಷನ್ ಅಡಿಯಲ್ಲಿ ಈ ಓಬಿರಾಯ ತಯಾರಾಗುತ್ತಿದ್ದಾನೆ. ಈ ಚಿತ್ರದ ಮುಹೂರುತ ಫೆಬ್ರವರಿ ಮೊದಲವಾರದಲ್ಲಿ. ಚಿತ್ರದ ಇನ್ನಿತರರ ಆಯ್ಕೆ ಸಧ್ಯಕ್ಕೆ ನಡೆಯುತ್ತಿದೆ.
Follow us on Google News and stay updated with the latest!
-
Contact at support@indiaglitz.com
Comments