ಮೇಲೋಡಿ ಹಾಡುಗಳ ಮೇಲೋಡಿ ಸಂಜೆ
Send us your feedback to audioarticles@vaarta.com
ಹೆಸರಾಂತ ಹಾಡುಗಾರ ರಾಜೇಶ್ ಕೃಷ್ಣ ಅವರು ನಾಯಕರಾಗಿದ್ದಾರೆ, ಜೊತೆಗೆ ಮತ್ತೊಬ್ಬ ನಾಯಕ ಚೇತನ್ ಸಹ ಗಾಯಕರು ಮೇಲೋಡಿ ಚಿತ್ರದಲ್ಲಿ. ಇವರಿಬ್ಬರ ಜೊತೆ ಹಾಡುಗಾರ ಹಾಗೂ ಸಂಗೀತ ನಿರ್ದೇಶಕ ಎಲ್ ಎನ್ ಶಾಸ್ತ್ರೀ ಸೇರಿದರೆ ಯಾವ ರೀತಿ ಧ್ವನಿ ಸುರುಳಿ ಬಿಡುಗಡೆ ಆಗಬೇಕೋ ಹಾಗೆ ಆಗುತ್ತಿದೆ ಆಗಸ್ಟ್ 9 (ಶನಿವಾರ) ಸಂಜೆ ಜ್ಞಾನ ಭಾರತಿ ಸಭಾಂಗಣದಲ್ಲಿ. ಅಂದು ಮೇಲೋಡಿ ಹಾಡುಗಳ ಮೇಲೋಡಿ ಸಂಜೆ! ಇಂತಹ ಒಂದು ಸಂಗೀತ ಸಂಜೆಯಲ್ಲಿ ಮೇಲೋಡಿ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಅನ್ನು ಸಂಗೀತ ನಿರ್ದೇಶಕರು ಹಾಗೂ ಮೇಲೋಡಿ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಆದ ಎಲ್ ಎನ್ ಶಾಸ್ತ್ರೀ ಅವರು ಯೋಜಿಸಿದ್ದಾರೆ.
ನಂಜುಂಡ ಅವರು 14 ವರ್ಷಗಳ ಬಳಿಕ ನಿರ್ದೇಶನಕ್ಕೆ ಹಿಂತಿರುಗಿರುವ ಮೇಲೋಡಿ ಮೂಲಕ ನಂಜುಂಡ ಕೃಷ್ಣ ಆಗಿ ಆಧುನಿಕ ಜಗತ್ತಿಗೆ ಅಷ್ಟೇ ಆಧುನಿಕವಾದ ಕಥಾ ವಸ್ತು ಇಟ್ಟುಕೊಂಡು ಸಿನೆಮಾ ನಿರ್ದೇಶನ ಮಾಡಿದ್ದಾರೆ.
ಶ್ರೀ ಅಂಬಾ ಭಗವತಿ ಫಿಲ್ಮ್ಸ್ ಅಡಿಯಲ್ಲಿ ಎಸ್ ಕೃಷ್ಣಮೂರ್ತಿ ಅವರು ನಿರ್ಮಾಣಮಾಡುತ್ತಿರುವ ಈ ಚಿತ್ರಕ್ಕೆ ಎಲ್ ಎನ್ ಶಾಸ್ತ್ರೀ ಅವರ ಮಾರ್ಗದರ್ಶನ ಜೊತೆ ಸಂಗೀತ ನಿರ್ದೇಶನ ಸಹ ಇದೆ.
ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಗಾಳಿಪಟ ನಂತರ ಈಗ ಈ ಸಿನೆಮಾದ ಮೂಲಕ ಮುಖ್ಯಾಪತ್ರದಲ್ಲಿ ಇದ್ದರೆ. ಜೊತೆಗೆ ಚೇತನ್ ಗಂಧರ್ವ, ಕಾರ್ತಿಕ ಮೆನನ್, ಅಕ್ಷತ ಮೂಲ್ರ, ರಾಮಕೃಷ್ಣ, ಮಂಡ್ಯ ರಮೇಶ್, ಸುಧಾಕರ್, ಶಾಮಂತ್, ಯಮುನ ಶ್ರೀನಿಧಿ, ಪ್ರಶಾಂತ್ ಸಂಭರ್ಗಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಆರ್ ವಿ ನಾಗೇಶ್ವರ ರಾವ್ ಛಾಯಾಗ್ರಹಣ, ವಿ ನಾಗೇಂದ್ರ ಪ್ರಸಾದ್ ಅವರ ಗೀತಾ ಸಾಹಿತ್ಯ, ಎಂ ಎಸ್ ಪಾಟೀಲ್ ಅವರ ಚಿತ್ರಕಥೆ, ತ್ರಿಭುವಣ್ ಅವರ ನೃತ್ಯ ಒದಗಿಸಿದ್ದಾರೆ.
Follow us on Google News and stay updated with the latest!
Comments