ಮುಸ್ಸಂಜೆಯಲ್ಲಿ ಮೇಲೋಡಿ ಸಂಜೆ
- IndiaGlitz, [Tuesday,August 12 2014]
ಶ್ರೀ ಅಂಬಾ ಭಗವತಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ಕೃಷ್ಣಮೂರ್ತಿ ಅವರ ಪ್ರಥಮ ಕಾಣಿಕೆ ಮೇಲೋಡಿ ಕನ್ನಡ ಸಿನೆಮಾ ಧ್ವನಿ ಸುರುಳಿ ಸಮಾರಂಭ ಅದ್ದೂರಿಯಾಗಿ, ಮೇಲೋಡಿ ಗೀತೆಗಳೊಂದಿಗೆ ಪ್ರೀತಿ ತುಂಬಿದ ವಾತಾವರಣದಲ್ಲಿ ಶನಿವಾರ ಸಂಜೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೆರವೇರಿತು. ಡಾಕ್ಟರ್ ಶಿವರಾಜಕುಮಾರ್, ಹಿರಿಯರಾದ ಕೆ ಎಸ್ ಎಲ್ ಸ್ವಾಮಿ, ಕಾಶಿನಾಥ್, ಸಂಗೀತ ನಿರ್ದೇಶಕರುಗಳದ ಗುರುಕಿರಣ್, ವಿ ಮನೋಹರ್, ಅರ್ಜುನ್ ಜನ್ಯ, ಅನೂಪ್ ಸೀಳಿನ್, ವಿ ಹರಿಕೃಷ್ಣ, ಧರ್ಮ ವಿಶ್ ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಹಾಗೂ ಮೇಲೋಡಿ ಚಿತ್ರ ತಂಡದ ಸಮ್ಮುಖದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿದರು. ಗಿಟಾರ್ ಇಂದ ಧ್ವನಿ ಸುರುಳಿಯನ್ನು ಆಚೆ ತೆಗೆಯುವದರೊಂದಿಗೆ ಏಳು ಹಾಡುಗಳ ಮೇಲೋಡಿ ಧ್ವನಿ ಸುರುಳಿ ಡಿ ಬೀಟ್ಸ್ ಸಂಸ್ಥೆಯಿಂದ ಮಾರುಕಟ್ಟೆಗೆ ಬಿಡುಗಡೆ ಆಯಿತು.
ಅಣ್ಣಾವ್ರ ಮಾತನ್ನು ನೆನಪಿಸಿಕೊಂಡ ಡಾಕ್ಟರ್ ಶಿವರಾಜಕುಮಾರ್ ಮೇಲೋಡಿ ಅನ್ನೋದು ಸಂಗೀತಕ್ಕೆ ಪರ್ಯಾಯ ಪದ. ಚಿತ್ರ ಕುಟುಂಬದಲ್ಲಿ ಪ್ರೀತಿ ಯಾವಾಗಲೂ ತುಂಬಿರಬೇಕು, ನನ್ನ ಪ್ರೀತಿ ಸದಾ ಈ ಚಿತ್ರರಂಗಕ್ಕೆ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು. ಡಾಕ್ಟರ್ ಶಿವರಾಜಕುಮಾರ್ ಅವರ ನಿಷ್ಠೆ, ಕಟು ನಿಲುವು ಸ್ವಂತ ಕಥೆಗಳ ಬಗ್ಗೆ ಇರುವುದನ್ನು ನಿರ್ದೇಶಕ ನಂಜುಂಡ ಕೃಷ್ಣ ಅವರು ಶ್ಲಾಘಿಸಿದರು.
ಹಿರಿಯ ಚಿತ್ರ ನಿರ್ದೇಶಕ ಕೆ ಎಸ್ ಎಲ್ ಸ್ವಾಮೀ ಮಾತನಾಡುತ್ತಾ ಸಂಗೀತದ ಮಾಧುರ್ಯಕ್ಕೆ ಮೇಲೋಡಿ ಅಂತಾರೆ, ಆಂಗ್ಲ ಭಾಷೆಯಲ್ಲಿ ಮೇಲೋಡಿ ಅಲ್ಲಿ ಎಂ ತೆಗೆದು ಹಾಕಿದರೆ ಮಿಕ್ಕ್ ಅಕ್ಷರಗಳಿಂದ ಯು ಸಿಕ್ ಅಂತ ಅರ್ಥ ಬರುತ್ತದೆ ಎಂದು ಹೇಳುತ್ತಾ ಎಲ್ ಎನ್ ಶಾಸ್ತ್ರೀ ಚಿತ್ರರಂಗದಲ್ಲಿ ಹಲವರ ಏಳಿಗೆಗೆ ಹೆಗೆಗೆಲ್ಲ ಕರಣರಾದವರು ಎಂದು ಉದಾಹರಣೆ ಸಮೇತ ಹೇಳಿದರು ಸ್ವಾಮಿಗಳು.
ಮತ್ತೊಬ್ಬ ಹಿರಿಯ ನಿರ್ದೇಶಕ ನಟ ಕಾ