ಮೀಸೆಗೊಂದು ದೊಡ್ಡ ಬೆಲೆ!
Send us your feedback to audioarticles@vaarta.com
ಮೀಸೆಹೊತ್ತ ಗಂಡಸಿಗೆ ಡಿಮಾಂಡ್ ಅಪ್ಪೋ ಡಿಮಾಂಡ್...ಹಾಡು ಕಾಶೀನಾಥ್ ಸಿನೆಮಾದಲ್ಲಿ ಕೇಳಿದ್ದೀರಾ ತಾನೇ. 1988 ರಲ್ಲಿ ಬಂದ ಅವಳೇ ನನ್ನ ಹೆಂಡತಿ ಸಿನೆಮಾದಲ್ಲಿ ಡಾಕ್ಟರ್ ಎಸ್ ಪಿ ಬಿ ಅವರು ಹೇಳಿದ್ದ ಹಾಡು ಆಮೇಲೆ ಅದೇ ಹೆಸರಿನಲ್ಲಿ 1991 ರಲ್ಲಿ ಸಿನೆಮಾ ಸಹ ಕಾಶಿನಾಥ್ ಮಾಡಿದರಲ್ಲ. ಜ್ಞಾಪಕ ಬಂತಾ?
ಈಗ ಯಾಗೆ ಪ್ರಸ್ತಾಪ ಅಂದಿರ. ಅದಕ್ಕೆ ಅಂಬರೀಶ್ ಅವರ ಮೀಸೆ ಮೇಲೆ ಕಣ್ಣು ಹಾಕಿ. ಅವರು ಅನಾರೋಗ್ಯದಿಂದ ಇದ್ದಾಗ ಮೀಸೆ ಹಾಗೆ ಈಗಲೂ ಉಳಿದಿದೆ. ಅದಕ್ಕೆ ಹೇಳೋದು ಕಾಮಿಟ್ಮೆಂಟ್ ಅಂತ.
ಸಾಮಾನ್ಯವಾಗಿ ಅಂಬರೀಶ್ ಅಂತವರು ಅನುಭವಿಸಿದ ಟ್ರೀಟ್ಮೆಂಟ್ ಇಂತಹ ಪೊದೆ ಮೀಸೆಗಳಿಗೆ ಆಸ್ಪತ್ರೆಯಲ್ಲಿ ಕಟ್ ಮಾಡಿ ಬಿಡುತ್ತಾರೆ.
ಆದರೆ ಅಂಬರೀಶ್ ಅವರ ಮೀಸೆ ಹಾಗೆ ಉಳಿದಿದೆ ಅಂದರೆ ಅವರು ಆ ಮೀಸೆ ಇಂದ ಇನ್ನೂ ಕೆಲಸ ಬಾಕಿ ಉಳಿಸಿಕೊಂಡಿದ್ದರು ಅಂತ ಅರ್ಥ. ನಿನ್ನೆ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿ ಅಲ್ಲಿ ಈ ಮೀಸೆ ಮೇಲೆ ಕೆಲವರ ಕಣ್ಣು ಬಿದದ್ದು ಆಯ್ತು.
ಅದಕ್ಕೆ ಅಂಬರೀಶ್ ಅವರು ಎನಂದರು ಗೊತ್ತೇ. ನನ್ನ ಸಿನೆಮಾಅಂಬರೀಷ ಚಿತ್ರಕ್ಕೆ ಈ ಮೀಸೆಗೆ ಇನ್ನ ಅರ್ಧ ಘಂಟೆ ಕೆಲಸ ಇದೆ. ಆ ಚಿತ್ರದ ಚಿತ್ರೀಕರಣ ಆದ ಮೇಲೆ ಈ ಮೀಸೆ ಬಗ್ಗೆ ಯೋಚನೆ ಮಾಡ್ತೀನಿ ಎಂದು.
ಅಂದಹಾಗೆ ಅಂಬರೀಷ ಚಿತ್ರದಲ್ಲಿ ಅಂಬರೀಶ್ ಅವರು ಮಾಡಿದ ಪಾತ್ರ ನಾಡ ಪ್ರಭು ಕೆಂಪೇಗೌಡನ ಪಾತ್ರ. ದರ್ಶನ್, ಪ್ರಿಯಾಮಣಿ, ರಚಿತ ರಾಮ್ ಅಭಿನಯದ ಈ ಚಿತ್ರದ ನಿರ್ದೇಶಕರು ಮಹೇಶ್ ಸುಖಧರೆ. ಇದರಲ್ಲಿ ಅಂಬರೀಶ್ ಅವರ ಪಾತ್ರ ದಿಂದ ಬೆಂಗಳೂರು ಹೆಂಗೆ ಇದ್ದದ್ದು ಹೆಂಗೆ ಭೂ ಕಬಳಿಕೆಗೆ ತುತ್ತಾಯಿತು ಎಂಬ ಪ್ರಸ್ತಾಪ ಇದೆ.
Follow us on Google News and stay updated with the latest!
Comments