ಮಿರ್ಚಿ ಮಂಡಕ್ಕಿ ಕಡಕ್ ಚಾಯ್
Send us your feedback to audioarticles@vaarta.com
ಆಹಾ, ಬಾಯಿ ನೀರೂರಿಸುವ ಉತ್ತರ ಕರ್ನಾಟಕದ ತಿಂಡಿ ತಿನಿಸು ಸಹ ಈಗ ಕನ್ನಡ ಚಿತ್ರದ ಶೀರ್ಷಿಕೆ ಆಗಿದೆ ನೋಡಿ. ಇಂತಹ ಶೀರ್ಷಿಕೆ ಇಂದ ಅದೇನು ಹೇಳಲು ಹೊರಟಿದ್ದರೋ ತಿಳಿಯದು. ಆದರೆ ಪ್ರಾಂತ್ಯಗಳನ್ನು ಗಮನದಲ್ಲಿ ಇಟ್ಟಿದೆವೆ ಅನ್ನೋದಕ್ಕೆ ಇಂತಹ ಶೀರ್ಷಿಕೆ ಅನ್ನಿಸುತ್ತದೆ. ಹೋಗಲಿ ಬಿಡಿ ಆಂಗ್ಲ ಪದಗಳನ್ನು ಬಳಸುವ ಬದಲು ಹೇಗಾದರೆ ಬಾಷೆ ಬಳಕೆ ಆಗಲಿ.
ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಆರಂಭವಾಗಿದೆ. ಈ ಹಂತದಲ್ಲಿ ಮೂರು ಹಾಡುಗಳ ಚಿತ್ರಿಕರಣ ನಡೆಯಲಿದೆ.
ಖ್ಯಾತ ನಿರ್ದೇಶಕರಾದ ಶಶಾಂಕ್, ಮಹೇಶ್ರಾವ್ ಬಳಿ ಸಹಾಯಕರಾಗಿದ್ದ ಸಂಜೋತಾ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆಯನ್ನು ಸಂಜೋತಾ ಅವರೇ ಬರೆದಿದ್ದಾರೆ.
ರತೀಶ್ ಛಾಯಾಗ್ರಹಣರುವ ಈ ಚಿತ್ರಕ್ಕೆ ಎಂ.ಎಸ್.ಬಾಲ ಅವರ ಸಂಕಲನವಿದೆ. ಹರಿಕಾವ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್ ಹಾಗೂ ಸಂಜೋತಾ ಬರೆದಿದ್ದಾರೆ. ಪ್ರದೀಪ್, ನಮೃತಾ, ಸಚಿನ್, ನಿಮಿಷ, ಬಸವಲಿಂಗಯ್ಯ ಹೀರೆಮಠ್, ವಿಶ್ವೇಶ್ವರಿ ಹಿರೇಮಠ್, ವಿಶಾಲ್, ಅಪೂರ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Follow us on Google News and stay updated with the latest!
Comments