ಮಾತು ಮುಗಿಸಿದ ಡಿ ಕೆ
Send us your feedback to audioarticles@vaarta.com
ಹ್ಯಾಟ್ ಟ್ರಿಕ್ ನಿರ್ದೇಶಕ ಹಾಗೂ ನಟ ಪ್ರೇಮ್ ಅವರ ಅಭಿನಯದ ಡಿ ಕೆ ಈಗಾಗಲೇ ಸನ್ನಿ ಲಿಯೋನ್ ಆಗಮನದಿಂದ ದೊಡ್ಡ ಸುದ್ದಿ ಮಾಡಿತ್ತು. ಈಗ ಚಿತ್ರದ ಮಾತುಗಳ ಭಾಗದ ಚಿತ್ರೀಕರಣ ಸಂಪೂರ್ಣ ಆಗಿರುವ ಬಗ್ಗೆ ನಿರ್ದೇಶಕ ವಿಜಯ್ ಹಂಪಲಿ ತಿಳಿಸಿದ್ದಾರೆ. ಒಂದು ಹಾಡು ಸಹ ಸಧ್ಯಕ್ಕೆ ಮುಗಿದಿದ್ದು ಉಳಿದ ನಾಲ್ಕು ಹಾಡುಗಳ ಚಿತ್ರೀಕರಣ ಮುಗಿಸಿದರೆ ಚಿತ್ರೀಕರಣ ಸಂಪೂರ್ಣ ಆದಂತೆ. ಒಂದು ಭರ್ಜರಿ ಧ್ವನಿ ಸುರುಳಿ ಸಮಾರಂಭದ ನಂತರ ನವೆಂಬರ್ ತಿಂಗಳಿನಲ್ಲಿ ಸಿನೆಮಾ ಬಿಡುಗಡೆ ಮಾಡುವ ಆಲೋಚನೆ ಇದೆ.
ಡಿ ಕೆ ಚಿತ್ರದ ಮುಹೂರ್ತದ ದಿನ ಕಪಾಲಿ ಚಿತ್ರಮಂದಿರದಲ್ಲಿ ಟ್ರೈಲರ್ ಸಹ ಬಿಡುಗಡೆ ಆಗಿದೆ. ಈ ಚಿತ್ರದಿಂದ ಉದಯ ಪ್ರಕಾಷ್ ಅವರು ವಿಜಯ್ ಹಂಪಲಿ ಎಂದು ನಾಮಕರಣ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಅವರದೇ ಕಥೆ,ಚಿತ್ರಕ್ತೆ ಹಾಗೂ ಸಂಭಾಷಣೆ ಸಹ ಒದಗಿಸಿದ್ದಾರೆ.
ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.ತುಮಕೂರು ಜಿಲ್ಲೆಯ ಸುದರ್ಶನ್ ಅವರು ಅವರು ಮೂರು ಹಾಡುಗಳನ್ನು ರಿಚಿಸಿದ್ದಾರೆ.
ಆನಂದ್,ಮಾಸ್ ಮಾಧ,ಶ್ರೀ ನಿವಾಸ್ ಪಿ ಬಾಬು,ನಾಗೇಶ್,ಪ್ರಭು,ಭದ್ರಿ,ಡ್ಯಾನಿ,ಬಾಬು,ಸೋಮು,ಮಂಜು,ರವಿ ತಾಂತ್ರಿಕ ವರ್ಗದಲ್ಲಿ ಹಾಗೂ ಸಹಾಯಕರಾಗಿ ಜೊತೆಯಾಗಿದ್ದಾರೆ.
ಆಬ್ ಕಿ ಬಾರ್ ಮೇರೆ ಸರ್ಕಾರ್ ಎನ್ನುವ ಡಿ ಕೆ ಚಿತ್ರವನ್ನು ಜೆ ಜೆ ಸಿನೆ ಪ್ರೊಡಕ್ಷನ್ ಅಲ್ಲಿ ಗ್ಲೆನ್ ಡಿಯಸ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ.
ಪ್ರೇಮ್ ಅವರಿಗೆ ಚೈತ್ರ ನಾಯಕಿ. ಶೋಬಾರಾಜ್,ಶರತ್ ಲೋಹಿತಾಶ್ವ,ರಿಶಿಕುಮಾರ ಸ್ವಾಮೀಜಿ ಹಾಗೂ ಇತರರು ತಾರಾ ಬಳಗದಲ್ಲಿ ಇದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments