ಮಾತಿನಮನೆಯಲ್ಲಿ ಮಳೆ
Send us your feedback to audioarticles@vaarta.com
ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್,ಚಂದ್ರು ಅವರು ನಿರ್ಮಿಸುತ್ತಿರುವ ಮಳೆ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು,ಚಿಕ್ಕಮಗಳೂರು,ಸಕಲೇಶಪುರ ಮುಂತಾದ ಕಡೆ ಮಳೆ ಗೆ ಚಿತ್ರೀಕರಣ ನಡೆದಿದೆ.
ನಿರ್ದೇಶಕ ಆರ್.ಚಂದ್ರು ಕಥೆ,ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ತೇಜಸ್ ನಿರ್ದೇಶಿಸುತ್ತಿದ್ದಾರೆ. ಪ್ರೇಂ(ನೆನಪಿರಲಿ) ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಸುಜ್ಞಾನ್ ಛಾಯಾಗ್ರಹಣ,ಜೆಸ್ಸಿಗಿಫ಼್ಟ್ ಸಂಗೀತ ನಿರ್ದೇಶನ,ಕೆ.ಎಂ.ಪ್ರಕಾಶ್ ಸಂಕಲನ,ಮುರಳಿ,ಹರ್ಷ ನೃತ್ಯ ನಿರ್ದೇಶನ,ಥ್ರಿಲ್ಲರ್ ಮಂಜು,ರವಿವರ್ಮ ಸಾಹಸ ನಿರ್ದೇಶನ,ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕೆ.ಮುನೀಂದ್ರಪುರ.
Follow us on Google News and stay updated with the latest!
-
Contact at support@indiaglitz.com
Comments