ಮಹಾಕಾಳಿ ಮಾತು
Send us your feedback to audioarticles@vaarta.com
ಮಹಾಕಾಳಿಗೆ ನಡೆಯುವುದು ಪೂಜೆ. ಆದರೆ ಇಲ್ಲಿ ಮಾತಿನ ಪೂಜೆ ನಡೆದಿದೆ. ಇದು ಮಹಾಕಾಳಿ ಮಾಲಾಶ್ರೀ ಅವರ ಸಿನೆಮಾದ ಬಗ್ಗೆ.
ಈ ಮಹಾಕಾಳಿ ಸಿನೆಮಾ ಒಳಗೆ ಮಾಲಾಶ್ರೀ ಅವರು ತಪ್ಪು ಮಾಡಿದವರಿಗೆ ಸರಿಯಾಗೇ ಪೂಜೆ ಮಾಡಿರ್ತಾರೆ ಬಿಡಿ. ಎಷ್ಟಾದರೂ ಅವರು ಸಾಹಸ ಸರದಾರಿಣಿ.
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸುತ್ತಿರುವ ಮಹಾಕಾಳಿ ಚಿತ್ರಕ್ಕೆ ಇದೇ ಹತ್ತರಿಂದ ಮಾತಿನ ಜೋಡಣೆ ಆರಂಭವಾಗಲಿದೆ. ನಾಲ್ಕು ಹಾಡುಗಳ ಹಾಗೂ ಒಂದು ಸಾಹಸ ಸನ್ನಿವೇಶದ ಚಿತ್ರೀಕರಣ ಬಾಕಿಯಿದ್ದು ಮೇ ಹನ್ನೆರಡರಿಂದ ಪ್ರಾರಂಭವಾಗಲಿದೆ.
ಅಜಯ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸುತ್ತಿದ್ದಾರೆ. ಸೆಲ್ವಂ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್ಕುಮಾರ್ ಸಂಭಾಷಣೆ ಬರೆದಿದ್ದಾರೆ.
ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಶ್ರೀನಿವಾಸಮೂರ್ತಿ, ಎಂ.ಎನ್.ಲಕ್ಷ್ಮೀದೇವಿ, ಪದ್ಮಿನಿಪ್ರಕಾಶ್, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ, ಪ್ರೆಮಲತಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments