ಭಜರಂಗಿ ಹನುಮಜ್ಜಯಂತಿ ಮಹೋತ್ಸವ!
- IndiaGlitz, [Saturday,December 14 2013]
ಶ್ರೀ ರಾಮನ ಭಂಟ ಶ್ರೀ ಅಂಜನೆಯನ ದಿನ ಇದೆ 14ರಂದು. ಅರ್ಥಾತ್ ಹನುಮ ಜಯಂತಿ. ಕನ್ನಡ ಪ್ರೇಕ್ಷಕರ ಮಟ್ಟಿಗೆ ಅದು ಎರಡು ದಿವಸ ಮುಂಚೆಯೇ ಭಜರಂಗಿ ಬಿಡುಗಡೆ ಇಂದ ಆಗಿ ಹೋಗಿದೆ. ಚಿತ್ರ ಆರಂಭವಾದ ದಿನ ಯಾವಾಗ ಬಿಡುಗಡೆ ಅನ್ನುವುದು ಕಲ್ಪನೆಗೆ ಬರುವುದಿಲ್ಲ. ಆದರೆ ಚಿತ್ರದ ವಿಷಯ ಸಂದರ್ಭಕ್ಕೆ ಕೆಲವೊಮ್ಮೆ ಹೋಲಿಕೆ ಆಗುವುದಿದೆ. ÂಭಜರಂಗಿÂ ಅಂತ ಸಿನೆಮಾ ಶೀರ್ಷಿಕೆ ಇಟ್ಟು ಹನುಮನ ದೊಡ್ಡ ಆಕೃತಿಯನ್ನು ಚಿತ್ರದಲ್ಲಿ ಆಗಾಗ್ಗೆ ಕಾಣುವಂತೆ ಮಾಡಿ ಅದು ನಿಜ ಜೀವನಕ್ಕು ಹತ್ತಿರ ಆಗುವುದು ಅಂದರೆ ಇದೆ ನೋಡಿ Â ಇಂದು ಹನುಮ ಜಯಂತಿ Â ಭಜರಂಗಿ ಮೊನ್ನೆಯೇ ಬಿಡುಗಡೆ ಆಗಿದ್ದಾನೆ.
ಇದು ನಿಜಕ್ಕೂ ಭಜರಂಗಿ ಮಹೋತ್ಸವವೇ ಸರಿ. ಚಿತ್ರದ ಒಳಗೆ ಹಾಗೂ ಹೊರಗೆ. ಕಳೆದ ಗುರುವಾರವೇ ಬಿಡುಗಡೆ ಆದ ÂಭಜರಂಗಿÂ ಹಲವು ಶಿವರಾಜಕುಮಾರ್ ಸಿನೆಮಗಳಿಂದ ಕಾಣದ ಒಪೆನಿಂಗ್ ದಕ್ಕಿಸಿಕೊಂಡಿದೆ. ಗುರುವಾರ ಬೆಳಗಿನ ಜಾವವೇ 2 ಘಂಟೆಗೆ ಮೊದಲ ಪ್ರದರ್ಶನ ಆರಂಭವಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 7 ಘಂಟೆಗೆ ಸಿನೆಮಾ ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ಮೂರು ಘಂಟೆಗೊಮ್ಮೆ ಟ್ರಾಫಿಕ್ ಜಾಮ್ ಸಹ ಆಗುತ್ತಿದೆ.
ಇದು ಭರ್ಜರಿ ಭಜರಂಗಿಯೇ ಸರಿ. 105 ನೇ ಶಿವರಾಜಕುಮಾರ್ ಸಿನೆಮಾ ಒಟ್ಟಾರೆ 210 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರುವುದು ಗಮನಾರ್ಹ. 200 ಗಡಿ ಚಿತ್ರಮಂದಿರಗಳು ಶಿವರಾಜಕುಮಾರ್ ಅವರ ಸಿನೆಮಕ್ಕೆ ದಕ್ಕಿರಲ್ಲಿಲ್ಲ. ಈಗ ಅದು ಆಗಿ ಹೋಗಿದೆ. ಅಂದ ಹಾಗೆ ಗಳಿಕೆಯೂ ಸಹ ಎಲ್ಲ ರೆಕಾರ್ಡ್ ಬ್ರೇಕ್ ಮಾಡುವ ಸಾಧ್ಯತೆ ಇದೆ. ಶಿವರಾಜಕುಮಾರ್ ಅವರು ಸಿಂಗಾಪುರ್ ಪ್ರವಾಸ ಕೈಗೊಂಡಿರುವ ಕಾರಣ ಶುಕ್ರವಾರ ಅವರು ಸುಮಾರು 16 ಘಂಟೆ ಅವರು ಸಿನೆಮಾದ ಪ್ರಚಾರಕ್ಕಾಗಿ ಮಿಸಲಿಟ್ಟು ಸಹಕರಿಸಿದ್ದಾರೆ.
ಎಲ್ಲ ಚಿತ್ರಮಂದಿರಗಳಲ್ಲೂ ಜನ ಮುಗಿ ಬಿದ್ದು ನೋಡ್ತಾ ಇದ್ದಾರೆ. ಯಾವುದೇ ಪ್ರಮಾಣದ ಗಳಿಕೆ ಡ್ರಾಪ್ ಆಗಿಲ್ಲ. ನೀವು ಕಡೆಯ 15 ನಿಮಿಷಗಳಲ್ಲಿ ಶಿವಣ್ಣ ಗದೇ ಹಿಡಿದು ಅಂಜನೆಯನ ಅಪರಾವತಾರ