ಬ್ಯಾಂಕಾಕ್ ನಲ್ಲಿ ಭಂಗಿರಂಗ
Send us your feedback to audioarticles@vaarta.com
ಉಪ್ಪಿ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಎ.ಜಿ.ಮಂಜುನಾಥ್,ನರಸಿಂಹಮೂರ್ತಿ,ಬಸವರಾಜು,ಸತ್ಯನಾರಾಯಣ ಅವರು ನಿರ್ಮಿಸುತ್ತಿರುವ ಭಂಗಿರಂಗ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಆ ಹಾಡಿನ ಚಿತ್ರೀಕರಣ ಸದ್ಯದಲ್ಲೇ ಬ್ಯಾಂಕಾಕ್ ನಲ್ಲಿ ನಡೆಯಲಿದೆ. ಈವರೆಗೂ ಮೂವತ್ತು ದಿನಗಳ ಕಾಲ ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆದಿದೆ.
ವಿಶೃತ್ ನಾಯಕ್ ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಅರುಣ್ ಸಾಗರ್ ಅಭಿನಯಿಸುತ್ತಿದ್ದಾರೆ. ಅನುಶ್ರೀ,ಶೃಂಗ,ಶ್ವೇತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ಹರೀಶ್ ಸಂಕಲನ,ಅರುಣ್ ಸಾಗರ್ ಕಲಾ ನಿರ್ದೇಶನ,ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ವಿಶೃತ್ ನಾಯಕ್ ಬರೆದಿದ್ದಾರೆ. ಈ ಚಿತ್ರಕ್ಕೆ ರಿಂಗ್ ಮಾಸ್ಟರ್ ಎಂಬ ಅಡಿಬರಹವಿದೆ.
Follow us on Google News and stay updated with the latest!
-
Contact at support@indiaglitz.com
Comments