ಬೆಂಗಳೂರು 23 ಆಟ ಮುಗಿದಿದೆ
Send us your feedback to audioarticles@vaarta.com
ಕ್ರಿಕೆಟ್ ಕ್ರೀಡೆಗೆ ಸಂಬಂದಿಸಿದ ಬೆಂಗಳೂರು 560 023 ಕನ್ನಡ ಸಿನೆಮಾ ತಮಿಳಿನಲ್ಲಿ ಬಂದ ಚೆನ್ನೈ 28& ಆದರೂ ಇಲ್ಲಿ ವಿಶಿಷ್ಟ ಬಗೆಯಲ್ಲಿ ತಯಾರಾಗಿ ತೆರೆ ಮೇಲೆ ಬರುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತ ಇದೆ.
ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಬ್ಬಿಂಗ್,ರೆರೆಕಾರ್ಡಿಂಗ್ ನಡೆಸುತ್ತಾ ಇರುವ ನಿರ್ದೇಶಕ ಪ್ರದೀಪ್ ರಾಜ್ ಅವರ ಚಿತ್ರ ದಿಶಾ ಪೂವಯ್ಯ ಅವರ ಅಭಿನಯದ ಒಂದು ಐಟೆಮ್ ಹಾಡನ್ನು ಸಹ ಚಿತ್ರೀಕರಿಸಿಕೊಂಡಿದೆ. ಬಂದ್ರೂ ನೋಡು ಸೇಟು ಆಂಟೀ....ಎಂಬ ಹಾಡನ್ನು ಮದುವೆಮನೆ ಪರಿಸರದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.
55 ದಿವಸಗಳ ಚಿತ್ರೀಕರಣದಲ್ಲಿ ಈ ಚಿತ್ರದ ಕ್ಲೈಮಕ್ಸ್ ಎರಡು ಟೀಮ್ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಚನ್ನಮನಕೆರೆ ಮೈದಾನದಲ್ಲಿ ಚಿತ್ರಿಸಿದ್ದಾರೆ ನಿರ್ದೇಶಕರು.
ಸೆಪ್ಟಂಬರ್ 21ಕ್ಕೆ ಧ್ವನಿ ಸುರುಳಿ ಬಿಡುಗಡೆ. ಚಿತ್ರದಲ್ಲಿ 9 ಹಾಡುಗಳಿವೆ. ಎರಡು ಮೂಲ ತಮಿಳು ಸಿನೆಮಾದಲ್ಲಿ ಯುವನ ಶಂಕರ್ ರಾಜ ಹಾಕಿದ ಟ್ಯೂನ್ ಅನ್ನು ಬಳಸಲಾಗಿದೆ ಸಂಗೀತ ನಿರ್ದೇಶಕ ಅನಿರುಧ್ ಆಂಡ್ರೂ. ಧರಣಿ ಈ ಚಿತ್ರದ ಛಾಯಾಗ್ರಾಹಕ.
ಕ್ರಿಕೆಟ್ ಕ್ರೀಡೆಯ ಜೊತೆಗೆ ಎರಡು ಬಡಾವಣೆಗಳ ಸುತ್ತ ನಡೆಯುವ ಘಟನೆಗಳ ಈ ಬೆಂಗಳೂರು 560 023 ಚಿತ್ರಕ್ಕೆ ಕರ್ನಾಟಕ ಬುಲ್ ಡೋಜರ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ತಂಡದ ಆಟಗಾರರು ಹಾಗೂ ನಟರುಗಳಾದ ಜೆ ಕೆ,ರಾಜೀವ್,ಚಂದನ್,ಧ್ರುವ ಶರ್ಮ,ರವಿ ಜೊತೆಗೆ ಸಂಜನ,ಶಿವಾನಿ,ಚಿಕ್ಕಣ್ಣ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಈ ಚಿತ್ರದ ನಿರ್ಮಾಪಕರುಗಳು ಪುನೀತ್ ಹಾಗೂ ಮನು ಅವರು.
ಕವಿರಾಜ್,ಶೈಲೇಶ್ ಹಾಗೂ ನಿರ್ದೇಶಕ ಪ್ರದೀಪ್ ರಾಜ್ ಅವರು ಗೀತ ಸಾಹಿತ್ಯ ಒದಗಿಸಿದ್ದಾರೆ. ವಿನೋದ್ ಮನೋಹರ್ ಅವರ ಸಂಕಲನ,ರಾಮು,ಶಿವ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments