ಬಾಂಬೆ ಮಿಠಾಯಿ ಗುರು ಭಲ

  • IndiaGlitz, [Monday,June 30 2014]

ಬಾಂಬೆ ಮಿಠಾಯಿ ಸಿನೆಮಾದಲ್ಲಿ ಮೂವರು ಸಂಗೀತ ನಿರ್ದೇಶಕರ ಸಂಗಮ ಆಗಿದೆ ಸಿನೆಮಾದ ಸಂಗೀತ ನಿರ್ದೇಶಕರು ವೀರ ಸಮರ್ಥ, ಸಿನೆಮಕ್ಕೆ ಹಾಡು ಹೇಳಿರುವ ಸಂಗೀತ ನಿರ್ದೇಶಕರು ಗುರುಕಿರಣ್ ಹಾಗೂ ಹಾಡನ್ನು ಬರೆದಿರುವವರು ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಹ ಸಂಗೀತ ನಿರ್ದೇಶಕರು.

ಮೊನ್ನೆ ಗುರುಕಿರಣ್ ಅವರ ಸ್ಟುಡಿಯೋ ಅಲ್ಲಿ ಬಾಂಬೆ ಮಿಠಾಯಿ ಶೀರ್ಷಿಕೆ ಗೀತೆ ನನಗಾಗಿ ಬಂತೆಲ್ಲ ಬೊಂಬಾಟ್ ಷೇಪ್, ರಂಗದ ಟಾಪು ಹಾಕ್ಕೊಂಡು ಬಂದೀಗ.... ಹಾಡನ್ನು ವೀರ ಸಮರ್ಥ ಅವರು ಧ್ವನಿ ಮುದ್ರಿಸಿಕೊಂಡಿದ್ದಾರೆ.

ಈ ಹಾಡನ್ನು ಎರಡು ದಿವಸ ನಾಯಕಿ ದಿಶಾ ಪಾಂಡೆ, ನಾಯಕ ನಿರಂಜನ್ ದೇಶ್ಪಾಂಡೆ ಹಾಗೂ ಇನ್ನಿತರ ಜೊತೆ ಇನ್ನೊವೆಟಿವೆ ಫಿಲ್ಮ್ ಸಿಟಿ ಅಲ್ಲಿ ಹಾಗೂ ಮೀನಾಕ್ಷಿ ಮಾಲ್ ಅಲ್ಲಿ ಒಂದು ದಿವಸ ಚಿತ್ರಿಸಿಕೊಳ್ಳಲಾಗಿದೆ. ಇದರೊಂದಿಗೆ ಚಿತ್ರದ ಎರಡು ದಿವಸ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.

ಟಚ್ ವುಡ್ ಕ್ರಿಯೇಷನ್ ಅಡಿಯಲ್ಲಿ ಸೌದ ಶರಿಫ್ ಹಾಗೂ ಅಮೀರ್ ಶರಿಫ್ ನಿರ್ಮಾಣದ ಬಾಂಬೆ ಮಿಠಾಯಿ ಚಂದ್ರಮೋಹನ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮೈಸೂರು, ಮಡಿಕೇರಿ, ಕುಶಾಲನಗರ, ಗೋಲ್ಡನ್ ಟೆಂಪಲ್, ಚಿಕ್ಕಮಗಳೂರು, ಕುದುರೆಮುಖ, ಕಳಸ ದೇವಸ್ಥಾನ, ಬಿಡಾಡಿ, ಮುರುಡೇಶ್ವರ, ಕಾರವಾರ, ಹುಬ್ಬಳ್ಳಿ, ಗದಗ್, ರಾಣಿ ಬೆನ್ನೂರ್, ಚಿತ್ರದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆ. ಬಾಂಬೆಮಿಠಾಯಿ ಚಂಚಲ ಮನಸ್ಸಿನ ಯುವಕನ ಸುತ್ತ ಹೆಣೆಯಲಾಗಿದೆ.

ನಿರಂಜನ್ ದೇಶ್ಪಾಂಡೆ, ದಿಶಾ ಪಾಂಡೆ ಜೊತೆಗೆ ಪೋಷಕ ವರ್ಗದಲ್ಲಿ ವಿಕ್ರಮ್, ಚಿಕ್ಕಣ್ಣ, ಕಿಶೋರಿ ಬಲ್ಲಾಳ್, ಸುನಿಲ್, ಬುಲ್ಲೆಟ್ ಪ್ರಕಾಷ್, ಮೈಕಲ್ ಮಧು, ಮೂಗು ಸುರೇಶ್, ನಲ್ಲೂರ್ ನಾರಾಯಣ್, ಬೇಬೀ ಬಿಂದುಶ್ರೀ ಇದ್ದಾರೆ.

ನಲ್ಲೂರ್ ನಾರಾಯಣ್ ಅವರು ಕಾರ್ಯನಿರ್ವಾಹಕ ನಿರ್ಮಾಪಕರು. ವೀರ್ ಸಮರ್ಥ ಅವರ ಸಂಗೀತ, ಆರ್ ಕೆ ಶಿವಕುಮಾರ್ ಅವರ ಛಾಯಾಗ್ರಹಣ, ಹರ್ಷ, ರಘು, ಕಲೈ ಅವರ ನೃತ್ಯ ನಿರŇ