ಬಸವಣ್ಣ ಬಿಡಲಾರೆ!
- IndiaGlitz, [Monday,September 29 2014]
ಬಿಡಲಾರೆ ಬಿಡಲಾರೆ....ಬಿಡ ಬಿಡ ಬಿಡಲಾರೆ....ಇದು ಉಪೇಂದ್ರ ಅವರ ಎಚ್ ಟು ಓ ಸಿನೆಮಾದ ಹಾಡು. ಈಗ ಉಪೇಂದ್ರ ಅವರ ಅಭಿನಯದ ಚಿತ್ರಕ್ಕೆ ಬಸವಣ್ಣ ಎಂಬ ಶೀರ್ಷಿಕೆಯನ್ನು ಬಿಡಲಾರೆ ಬಿಡಲಾರೆ ಎಂದು ಗುನುಗುತ್ತಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು. ಅದೇ ಕೊಲೆ ಪಾತಕರ ದಂಡುಪಾಳ್ಯ ಸಿನೆಮಾ ಮಾಡಿ ಇದು ಮನರಂಜನೆ ಸಿನೆಮಾ ಎಂದವರು.
ಮೊನ್ನೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಹೇಳಿದ್ದು ನನ್ನ ಪ್ರಕಾರ ಯಾರು ಏನೇ ಹೇಳಿದ್ರು ಚಿತ್ರದ ಶೀರ್ಷಿಕೆ ಬಸವಣ್ಣ ಅಂತಲೇ. ಚಿತ್ರದ ಕಥಾ ನಾಯಕ ಸಹ ಬಸವಣ್ಣ ಹೆಸರಿನವನು.
ಬಹಳ ಒತ್ತಾಯದ ಮೇಲೆ ನಾನು ಜಗತ್ತಿಗಾಗಿ ಇಂದು ಈ ಸಿಂಬಲ್ ಇರುವ ಶೀರ್ಷಿಕೆಯನ್ನು ಬಿಡುಗಡೆ ಮಾಡುತ್ತಿದ್ದೇನೆ. ಹಾಗೆ ನೋಡಿದರೂ ಸಿನೆಮಾ ವೀಕ್ಷಿಸಿ ತಪ್ಪು ಅಂತ ಹೇಳಲು ಸೆನ್ಸಾರ್ ಮಂಡಳಿ ಇದೆ. ನನಗ್ಯಾಕೋ ಅರ್ಥ ಆಗ್ತಿಲ್ಲ ಈ ಬಸವಣ್ಣ ಶೀರ್ಷಿಕೆಗೆ ನನ್ನನ್ನು ಯಾಕೆ ಗೋಳು ಹೊಯಿಕೊತ ಇದ್ದರೆ ಎಂದು ಅಂತಾರೆ ಶ್ರೀ ನಿವಾಸರಜು.
ಹೌದು. ಸಿನೆಮಾ ಧರ್ಮ ಹಾಗೂ ಅಂಡರ್ ವರಲ್ಡ್ ಬಗ್ಗೆ ಇದೆ. ಇದೊಂದು ಕಾಲ್ಪನಿಕ ಕಥೆ ಅಷ್ಟೇ. ಯಾರಿಗೂ ನೋವು ಮಾಡಿಸುವ ಉದ್ದೇಶ ನನಗಿಲ್ಲ. ಬಸವಣ್ಣ ಅಥವಾ ಬ್ರಾಹ್ಮಣ ಶೀರ್ಷಿಕೆ ಎಂದು ಯೋಚಿಸಿದ್ದೆ. ಒತ್ತಾಯದ ಮೇಲೆ ಈಗ ಈ ಶೀರ್ಷಿಕೆ ಚಿನ್ಹೆ ಮುಖಾಂತರ ಇಟ್ಟಿದ್ದೇನೆ ಅಂತಾರೆ ನಿರ್ದೇಶಕರು.
ಇಲ್ಲಿ ನಾನೊಬ್ಬ ನಟ. ಶಿವನ ದೇವಸ್ಥಾನದ ಮುಂದೆ ಇರುವ ಬಸವ ಅಂತ ಹೇಳಲು ಬಯಸಿದರು ಸೂಪರ್ ಸ್ಟಾರ್ ಉಪೇಂದ್ರ. ಸಿನೆಮಾ ಅಂತೂ ತೆಲುಗು ರೆಂಜ್ ಅಲ್ಲಿ ಸೊಗಸಾಗಿ ಬಂದಿದೆ ಹಾಗೂ ನಿರ್ಮಾಪಕ ಸಿ ಆರ್ ಮನೋಹರ್ ಅವರು ದೊಡ್ಡ ಮಟ್ಟದಲ್ಲಿ ಸಿನೆಮಾ ಮಾಡಿರುವುದಾಗಿ ಉಪೇಂದ್ರ ನುಡಿಯುತ್ತಾರೆ.
ಆದರೆ ಸತ್ಯವಾದ ಮಾತು ಹಿರಿಯ ನಟ ದೊಡ್ಡಣ್ಣ ಅವರಿಂದ ಬಂತು. ಆದೇನೊಪ್ಪ ಮೊದಲಿಂದಲೂ ಉಪೇಂದ್ರ ಚಿತ್ರದ ಶೀರ್ಷಿಕೆಯೇ ಆರಂಭದಿಂದ ದೊಡ್ಡ ಪ್ರಾಚಾರ ಪಡೆದು ಕೊಳ್ಳುತ್ತದೆ ಎಂದರು. ಈಗ ಅರ್ಥ ಆಯ್ತಾ. ಪ್ರಚಾರಕ್ಕಾಗಿ ಹೀಗೆಲŇ