ಬಳ್ಳಾರಿಯಲ್ಲಿ ಪವರ್ * * *
Send us your feedback to audioarticles@vaarta.com
ಏನಿದು ಪವರ್ ಮುಂದೆ ಮೂರು ಸ್ಟಾರ್ ಇದೆಯಲ್ಲ ಅಂದಿರ. ಹೌದು. ಪವರ್ ಅಂತ ಸಿನೆಮಾ ಹೊಸ ಹುಡುಗರಿಂದ ಈಗಾಗಲೇ ನೋಂದಾವಣೆ ಆಗಿದೆ. ಹಾಗಾಗಿ ಪುನೀತ್ ರಾಜಕುಮಾರ್ ಅವರ ಸಿನೆಮಕ್ಕೆ ಪವರ್ ಮುಂದೆ ಮೂರು ಸ್ಟಾರ್ ಇಡಲಾಗಿದೆ. ಇದು ತೆಲುಗು ಸಿನೆಮಾ ದೂಕುಡು ರೀಮೇಕ್. ಪುನೀತ್ ರಾಜಕುಮಾರ್ ಅವರು ಎಂದೆಂದಿಗು ಪವರ್ ಸ್ಟಾರ್ ಹಾಗಾಗಿ ಅವರ ಬಿರುದನ್ನು ಹೀಗೆ ಬಳಸಲಾಗುತ್ತಿದೆ.
೧೪ ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ಅವರು ನಿರ್ಮಿಸುತ್ತಿರುವ ಮತ್ತು ಕೊಲ್ಲ ಪ್ರವೀಣ್ ಅವರ ಸಹ ನಿರ್ಮಾಣವಿರುವ ಪವರ್ * * * ಚಿತ್ರದ ಆಡಿಯೋ ರಿಲೀಸ್ ಜೂನ್ ೨೮ರ ಶನಿವಾರ ಸಂಜೆ ೭ಗಂಟೆಗೆ ಬಳ್ಳಾರಿಯ ಮುನ್ಸಿಪಲ್ ಗ್ರೌಂಡ್(ಹಳೇ ಬಸ್ ನಿಲ್ದಾಣದ ಹತ್ತಿರ) ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಅಪಾರ ವೆಚ್ಚದಲ್ಲಿ ಬಹು ತಾರಾಗಣದೊಂದಿಗೆ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಈ ಚಿತ್ರದ ಆಡಿಯೋ ರಿಲೀಸ್ ನಲ್ಲಿ ಚಿತ್ರದ ನಾಯಕರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನಾಯಕಿ ತ್ರಿಷಾ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ಅಂದಿನ ಸಮಾರಂಭಕ್ಕೆ ತೆಲುಗಿನ ಖ್ಯಾತ ನಟ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಬರುವ ಸಾಧ್ಯತೆಯಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ದೂಕುಡು ಚಿತ್ರದ ರಿಮೇಕ್ ಆಗಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಈ ಚಿತ್ರದ ಹಾಡುಗಳ ಸೀಡಿಯನ್ನು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಸಂಸ್ಥೆಯವರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.
ಕೆ.ಮಾದೇಶ್ ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ವಿ. ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ,ರವಿವರ್ಮ ಸಾಹಸ ನಿರ್ದೇಶನ, ಗಣೇಶ್, ಹರ್ಷ, &
Follow us on Google News and stay updated with the latest!
-
Contact at support@indiaglitz.com
Comments