ಫೇರ್ ಅಂಡ್ ಲವ್ಲಿ ಹೊಸ ಪ್ರಯತ್ನ
Send us your feedback to audioarticles@vaarta.com
ನಿರ್ದೇಶಕ ರಘುರಾಮ್ ಅವರು ಫೇರ್ ಅಂಡ್ ಲವ್ಲಿ ಚಿತ್ರಕ್ಕೆ ಸಕ್ಕತ್ತಾಗೆ ಹೊಸ ಪ್ರಯತ್ನಗಳನ್ನು ತುಂಬುತ್ತಿದ್ದಾರೆ. ಕನ್ನಡ ಸಿನೆಮಾ ಒಂದರಲ್ಲಿ ಕೆಲವು ಹಿರಿಯ ಕಲಾವಿದರುಗಳ ಮಿಮಿಕ್ರಿ ಉಪಯೋಗಿಸಿ ಶೀರ್ಷಿಕೆ ಮಾಡುವುದು ಈಗಿನ ವಿಶೇಷ ನಿರ್ದೇಶಕ ರಘುರಾಮ್ ಅವರಿಂದ.
ತೆರೆಯ ಮೇಲೆ ಬರುವ ಪ್ರತಿ ಕಲಾವಿದ, ತಂತ್ರಜ್ಞರಿಗೆ ಒಂದು ಪುಟ್ಟ ಮುನ್ನುಡಿ ಮಾಡಲಾಗಿದ್ದು ಆ ಮುನ್ನುಡಿಯನ್ನು ಕೆಲವು ಜನಪ್ರಿಯ ಕಲಾವಿದರ ಮಿಮಿಕ್ರಿ ಇಂದ ಅದನ್ನು ಕೇಳಬಹುದು. ಇದು ವರೆವಿಗೂ ಸಪ್ಪೆ ಆಗಿ ನಾವು ನೀವು ಕೇವಲ ಶೀರ್ಷಿಕೆ ಮಾತ್ರ ನೋಡುತ್ತಿದ್ದೇವೆ. ಅದಕ್ಕೂ ಒಂದು ಚೈತನ್ಯವನ್ನು ನಿರ್ದೇಶಕ ರಘುರಾಮ್ ಅವರು ನೀಡಲಿದ್ದಾರೆ.
ರ್ಮಾಪಕಿ ಶಿಲ್ಪಾ ರಮೇಶ್ ರಮಣಿ ಅವರ ಜೇಡ್ ಪ್ಲಾನೆಟ್ ಅಡಿಯಿಂದ ತಯಾರಾದ ಫೈರ್ ಅಂಡ್ ಲವ್ಲಿ ಚಿತ್ರಕ್ಕೆ ಕಥೆಯನ್ನು ಒದಗಿಸಿರುವವರು ನಟ ಹಾಗೂ ಪತ್ರಕರ್ತ ಯೆತಿರಾಜ್.
ಫೇರ್ ಆಗಿ ಶ್ವೇತ ಶ್ರೀವತ್ಸ ಇದ್ದರೆ,ಲವ್ಲಿ ಆಗಿ ಲವ್ಲಿ ಸ್ಟಾರ್ ಪ್ರೇಂಕುಮಾರ್ ಇದ್ದಾರೆ. ಹಿರಿಯ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ಒಂದು ಹಾಡಿನಲ್ಲಿ ಬರುವರು. ಆನಂದಪ್ರಿಯ ಅವರು ಸಂಭಾಷಣೆ ಹಾಗೂ ಚಿತ್ರಕತೆಯಲ್ಲಿ ತೊಡಗಿರುವುವರು.
ಫೇರ್ ಅಂಡ್ ಲವ್ಲಿ ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಈಗಾಗಲೇ ಭರ್ಜರಿ ಯಶನ್ನು ಕಂಡಿದೆ. ರಿಂಗಾಗಿದೆ ನನ್ನೆದೆ ಫೋನು....ಅನಿರೀಕ್ಷಿತ ಲೈಫ್ ಅಲ್ಲಿ....ಹಾಗೆ ಒಂದು ಮಾತು ಹೇಳುವೆ....ಈ ಕಾಣದ ಕಣ್ಣಿಗೆ... ಹಾಡುಗಳು ಸಕ್ಕತ್ ಮೇಲೋಡಿ ತುಂಬಿವೆ ಎಂದು ತಿಳಿದು ಬಂದಿದೆ.
Follow us on Google News and stay updated with the latest!
-
Contact at support@indiaglitz.com
Comments