ಪ್ರಿಯಾಮಣಿ - ಉಪ್ಪಿ ತಪ್ಪು ಅಭಿನಯಿಸಿದ

  • IndiaGlitz, [Friday,September 20 2013]

ಉಪ್ಪಿ ಜನುಮದಿನದ ಪಾರ್ಟೀಗೆ ಆಗಮಿಸಿದ ರಾಷ್ಟ್ರೀಯ ಪುರಸ್ಕೃತ ನಟಿ ಪ್ರಿಯಾಮಣಿ ಅವರು ಈ ಸಂದರ್ಭದಲ್ಲಿ ನಾನು ಉಪ್ಪಿ ಅವರನ್ನು ಬಹಳ ವರ್ಷಗಳಿಂದ ನೋಡುತ್ತಲೇ ಬರುತಿದ್ದೇನೆ. ಅವರ ಜೊತೆ ಒಂದು ತೆಲುಗು ಭಾಷೆಯಲ್ಲಿ ಅಭಿನಯಿಸಿರುವೆ. ಅವರ ಕಣ್ಣು ನನಗೆ ಬರುವ ಸನ್ನಿವೇಶ ಅದು. ಅದರೆ ಅವರ ಕಣ್ಣಿನ ಫಾಸ್ಟ್ ಚಾಲನೆ ಮಾತ್ರ ನನ್ನಿಂದ ಸಾಧ್ಯವಾಗಲೇ ಇಲ್ಲ. ಅದನ್ನು ಗ್ರಾಫಿಕ್ಸ್ ಅಲ್ಲಿ ಅಡ್ಜಸ್ಟ್ ಮಾಡಲಾಯಿತು ಎಂದು ಗುಟ್ಟು ಬಿಟ್ಟು ಕೊಟ್ಟರು.

ಉಪೇಂದ್ರ ಅವರ ನಗು ಪೊದೆಯಂತ ತಲೆಗೂದಲು ಹಾಗೂ ಅವರ್ ಕಣ್ಣಿನ ಚಲನೆ ಬಗ್ಗೆ ಅಪಾರವಾಗಿ ಮೆಚ್ಚಿಕೊಂಡ ಚಾರುಲತಾ ಪ್ರಿಯಾಮಣಿ ಅವರು ಬಡಪಟ್ಟಿಗೂ ಉಪೇಂದ್ರ ಅವರಲ್ಲಿ ಇರುವ ಮೈನಸ್ ಪಾಯಿಂಟ್ ಅನ್ನು ಹೇಳಲು ಸಾಧ್ಯವಿಲ್ಲ ಎಂದರು.

ಮತ್ತೊಮ್ಮೆ ಒತ್ತಾಯಿಸಿದಾಗ ಪ್ರಿಯಾಮಣಿ ಅವರು ನಾನು ಮೊದಲು ಉಪೇಂದ್ರ ಜೊತೆ ನಾಯಕಿಯಾಗಿ ನಟಿಸಿದ ನಂತರ ಈ ಪ್ರಶ್ನೆಗೆ ಉತ್ತರಿಸುವೆ ಎಂದರು.

ಪ್ರಿಯಾಮಣಿ ಐದು ಭಾಷೆಗಳಲ್ಲಿ ಅಭಿನಯಿಸುವ ಖ್ಯಾತ ನಟಿ. ಅವರ ಜೊತೆ ಅಭಿನಯಿಸಲು ನಾನು ಬಹಳ ಯೋಚಿಸಬೇಕು ಎಂದರು ಉಪ್ಪಿ. ಉಪ್ಪಿ ಆ ಮ್ಯಾಜಿಕಲ್ ಕಣ್ಣಿನ ಚಲನೆಯು ಸಹ ಅಂದು ಪ್ರಿಯಾಮಣಿ ಮುಂದೆ ಮಾಡಿಕೊಟ್ಟರು ಉಪೇಂದ್ರ.