ಪ್ರಸಾದ್ ನಲ್ಲಿ ನಮಕ್ ಹರಾಮ್

  • IndiaGlitz, [Thursday,September 25 2014]

ಮಾತಿಗೆ ನಿಂತ ನಮಕ್ ಹರಾಮ್.ಪದೇ ಪದೇ ಚಿತ್ರದಿಂದ ಖ್ಯಾತಿ ಗಳಿಸಿದ ನಾಗರಾಜ್ ಪೀಣ್ಯ ಅವರ ಎರಡನೇ ಸಿನೆಮಕ್ಕೆ ಲಗುಬಗೆ ಇಂದ ಚಿತ್ರೀಕರಣ ಮುಗಿಸಿ ನಮಕ್ ಹರಾಮ್ ಅನ್ನು ಮಾತುಗಳ ಜೋಡಣೆ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಮಹೇಶ್ ಅವರ ಮೊದಲ ಸಿನೆಮಾ ಅಲ್ಲದೆ ರೇಡಿಯೊ ಜಾಕಿ ರಶ್ಮಿ ಅವರ ಮೊದಲ ಸಿನೆಮಾ ಕೂಡ ಇದು.

ನಿಹಾಲ್ ಮೂವೀಸ್ ಲಾಂಛನದಲ್ಲಿ ಗಂಗಾಧರ್,ಶಂಕರ್ ರಾಜು,ಆನಂದ್,ನಿರ್ಮಾಣದ ನಮಕ್ ಹರಾಮ್ ಚಿತ್ರಕ್ಕೆ ಪ್ರಸಾದ್ ನಲ್ಲಿ ಡಬ್ಬಿಂಗ್ ಕಾರ್ಯ ಸಾಗುತ್ತಿದೆ. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ನಾಗರಾಜ್ ಪೀಣ್ಯ,ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ,ಛಾಯಾಗ್ರಹಣ-ನಂದಕುಮಾರ್,ಸಂಗೀತ ಸತೀಶ್ ಆರ್ಯನ್,ಸಾಹಿತ್ಯ-ಸುನಿ,ನಾಗರಾಜ್ ಪೀಣ್ಯ,ಸಂತು,ನಾಗೇಶ್,ಸತೀಶ್ ಆರ್ಯನ್,ಸಂಕಲನ-ಸುರೇಶ್,ಸಾಹಸ-ಡಿಪರೆಂಟ್ ಡ್ಯಾನಿ,ನೃತ್ಯ- ಹರಿಕೃಷ್ಣ,ತಾರಾಗಣದಲ್ಲಿ - ಮಹೇಶ್,ಆರ್.ಜೆ. ರ ್ಯಾಪಿಡ್ ರಶ್ಮಿ,ರಾಜೇಂದ್ರ ಕಾರಂತ,ರಾಕ್ ಲೈನ್ ಸುಧಾಕರ್,ಗೌರೀಶ ಅಕ್ಕಿ,ಯತಿರಾಜ್,ಶರಣ್ ಕಬ್ಬೂರು,ಡ್ಯಾನಿ ಪುಟ್ಟಪ್ಪ,ಕಮಲ್,ಪಲ್ಲಕ್ಕಿ ರಾಧಾಕೃಷ್ಣ,ಮಳವಳ್ಳಿ ಸಾಯಿ ಕೃಷ್ಣ,ಮುಂತಾದವರಿದ್ದಾರೆ.