ಪುನೀತ್ ರಾಯಭಾರಿ

  • IndiaGlitz, [Tuesday,September 24 2013]

ಅಪ್ಪನಂತೆ ಮಗ ಎನ್ನುವುದಕ್ಕೆ ಡಾಕ್ಟರ್ ರಾಜ್ ಕುಟುಂಬದಿಂದ ಮತ್ತೊಮ್ಮೆ ಉದಾಹರಣೆ ಆಗಿ ಬಂದಿದೆ. ಅಂದು ಡಾಕ್ಟರ್ ರಾಜಕುಮಾರ್ ಅವರು ಕರ್ನಾಟಕ ಹಾಲು ಉತ್ಪಾದಕರ ಪರವಾಗಿ ಮೊದಲ ಭಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಪುಕ್ಕಟ್ಟೆಯಾಗಿ. ಯಾವುದೇ ಅಪೇಕ್ಷೆ ಇಲ್ಲದೆ. ಅವರ ನೆಚ್ಚಿನ ಮಗ ಪುನೀತ್ ರಾಜಕುಮಾರ್ ಅವರು ಅಂತಹ ಕೆಲವು ಸಮಾಜ ಪರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ನಾವು ಕಂಡಿದ್ದೇವೆ. ಚುನಾವಣಾ ಆಯೋಗಕ್ಕೆ ಅವರು ರಮೇಶ್ ಅರವಿಂದ್ ಹಾಗೂ ಐಂದ್ರಿತಾ ರಾಯ್ ಜೊತೆ ರಾಯಭಾರಿ ಆಗಿದ್ದರು.

ಇದೀಗ ಅವರು ಕರ್ನಾಟಕ ರಾಜ್ಯದ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿಶಿಕ್ಷಣವೇ ಶಕ್ತಿಎಂಬ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಶಾಲೆ ಬೆಲ್ ಹೊಡೆಯುವುದುಶಾಲೆಗೆ ಬನ್ನಿ ಎನ್ನುವುದು ಹಾಗೂ ಕೊಠಡಿಯಲ್ಲಿ ಕುಳಿತು ವಿಧ್ಯೆ ಕಲಿಯಿರಿ ಎಂಬ ದೃಶ್ಯಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.

ಉಳ್ಳಾಲದ ಉಪನಗರ ಕುವೆಂಪು ಶತಮಾನೋತ್ಸವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಾಗೃತಿ ಆಂದೋಲನ ಚಿತ್ರೀಕರಣ ನಡೆಯಿತು.

ಇದರ ಚಿತ್ರೀಕರಣ ಮುಗಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾರತೀಯ ಸಿನೆಮಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಪಾಲ್ಗೊಂಡು ನಾಳೆ ನಿನ್ನಿಂದಲೇ ತಂಡವನ್ನು ಅಮೆರಿಕದಲ್ಲಿ ಸೇರಲಿದ್ದಾರೆ.