ಪುಟ್ಟಯ್ಯಜ್ಜ ಪ್ರಬ್ಲಾಮ್
- IndiaGlitz, [Wednesday,August 13 2014]
ಕಥೆಯ ವಿಚಾರವಾಗಿ ಶಿವಯೋಗಿ ಪುಟ್ಟಯಜ್ಜ ಸಿನೆಮಾ ಕುರಿತು ಈಗಾಗಲೇ ಕೋರ್ಟ್ ಮೆಟ್ಟಿಲು ಏರಿದೆ. ಮಠದ ವತಿಯಿಂದ ಪುಟ್ಟರಾಜ ಗವಾಯಿಗಳ ಕಥೆ ಸಿನೆಮಾ ಮಾಡಲು ಇಬ್ಬರಿಗೆ ಅನುಮತಿ ನೀಡಿರುವುದೇ ರಗಳೆಗೆ ಕಾರಣ.
ಆದರೆ ಇತ್ತ ಕಡೆ ಶ್ರೀ ತುಳಜಾಭವಾನಿ ಕಂಬೈನ್ಸ್ ಶ್ಯಾಮ್ ಮುಕುಂದನವಲೆ ಅವರು ಚಿತ್ರದ ಪ್ರಥಮ ಪ್ರತಿಯನ್ನು ಪಡೆಯಲು ತಾರತುರಿಯಲ್ಲಿ ಇದ್ದಾರೆ. ಗಾನಯೋಗಿ ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಆಧಾರಿತ ಚಿತ್ರ ಶಿವಯೋಗಿ ಪುಟ್ಟಯಜ್ಜ ಡಿ ಟಿ ಎಸ್ ಕೆಲಸವನ್ನು ಮುಗಿಸಿ ಎಂ ಆರ್ ಸ್ಟುಡಿಯೋದಲ್ಲಿ ಡಿ ಐ ಕೆಲಸದ ಕೊನೆ ಕ್ಷಣದಲ್ಲಿ ಇದೆ.
ಕನ್ನಡದ ಹಿರಿಯ ನಟ ಉದಯಕುಮಾರ್ ಅವರ ಮೊಮ್ಮಗಳು ಹಂಸವಿಜೇತ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅಮರ ಪ್ರಿಯ ಅವರ ಸಂಗೀತವಿದೆ. ಹಲವಾರು ರಚನೆಗಳನ್ನು ತೆರೆಯಮೇಲೆ ಪುಟ್ಟರಾಜ ಗಾವಯಿಗಳಿಗೆ ಗೌರವರ್ಪಣೆ ಮಾಡಲು ತರಲಾಗಿದೆ. ಕಥೆ ಚಿತ್ರಕಥೆ, ಸಂಭಾಷಣೆ ಉಮೇಶ್ ಪುರನಿಕ್ ಮಟ ಅವರದು,ಅಮಿತ್ ಜವಲ್ಕರ್ ಈ ಚಿತ್ರದ ಸಂಕಲನಕಾರರು. ಪೂಜಾ ಶಂಕರಾನಂದ ಸ್ವಾಮಿಗಳು, ಅಮರಪ್ರಿಯ, ಶಿಶುನಾಳ ಶರೀಫ್ ಹಾಗೂ ಪುಟ್ಟಯಜ್ಜರ ಸಾಹಿತ್ಯ ಈ ಚಿತ್ರ ಒಳಗೊಂಡಿದೆ.
ನಟ ವಿಜಯ ರಾಘವೇಂದ್ರ ಅವರ ಪಾಲಿಗೆ ಮತ್ತೊಂದು ಅತ್ಯುತ್ತಮವಾದ ಪಾತ್ರ ಸಂದಾಯವಾಗಿದೆ. ಈ ಹಿಂದೆ ಗಾನಯೋಗಿ ಪಂಚಾಕ್ಷರ ಗವಾಯಿ ಚಿತ್ರದಲ್ಲೂ ಅವರು ಕಿರಿಯ ಗವಾಯಿಗಲಾಗಿ ಅಭಿನಯಿಸಿದ್ದರು. ಈಗ ಹಿರಿಯ ಗವಾಯಿಗಳಾಗಿ ಅಭಿನಯಿಸಿರುವರು. ಹಿರಿಯ ನಟಿ ಶ್ರುತಿ, ಅನು ಪ್ರಭಾಕರ್, ಅಭಿಜಿತ್, ಶಶಿಕುಮಾರ್,ಶಂಕರಲಿಂಗ ಸುಗ್ನಳ್ಳಿ, ಉಮೇಶ್ ನವಲೆ, ಭವ್ಯಶ್ರೀ ರಾಯ್, ರಾಮಾನಂದ ನಾಯಕ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.