ಪಾತರಗಿತ್ತಿ ಸ್ಪರ್ಧೆ
Send us your feedback to audioarticles@vaarta.com
ಪಾತರಗಿತ್ತಿ ಕನ್ನಡ ಸಿನಿಮಾ ಸಂಪೂರ್ಣ ತಯಾರಾಗಿದ್ದು,ಧ್ವನಿ ಸುರುಳಿ ಬಿಡುಗಡೆ ಸಹ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಇದೀಗ ಒಂದು ಸ್ಪರ್ಧೆ ಏರ್ಪಾಟು ಮಾಡಲು ಸಜ್ಜಾಗಿದೆ.
ಹುಚ್ಚರಿಗೆ ಹುಚ್ಚು ಹಿಡಿಸೊ ಅಂದವೇ ನಿನ್ನದು.....ಎಂಬ ಹಾಡಿಗೆ ಕರ್ನಾಟಕದಲ್ಲಿ ಇರುವ ನೃತ್ಯ ತಂಡಗಳಿಗೆ ಒಂದು ಸ್ಪರ್ದೆಯನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಾದ ಮೂರು ತಂಡಗಳಿಗೆ ನಗದು ಬಹುಮಾನದ ಜೊತೆಗೆ ಉಡುಗೊರೆಯನ್ನು ಸಹ ನೀಡಲಾಗುವುದು.
ಕರ್ನಾಟದಾದ್ಯಂತ ಇರುವ ನೃತ್ಯ ತಂಡಗಳು ಹಾಡನ್ನು ಕೇಳಿ ಅದಕ್ಕೆ ತಕ್ಕ ಹಾಗೆ ನೃತ್ಯ ನಿರ್ದೇಶನ ಮಾಡಿ ಅದನ್ನು ಚಿತ್ರೀಕರಿಸಿ ಸಿ ಡಿ ಅಥವಾ ಡಿ ವಿ ಡಿ ಮುಖಾಂತರ ಅದನ್ನು ನಿರ್ಮಾಪಕರಿಗೆ ತಲುಪಿಸಬೇಕು. ಇದಕ್ಕೆ ನವಂಬರ್ 15 ರಂದು ಕಡೆಯ ದಿನ.
ನೃತ್ಯ ತಂಡಗಳು ಹಾಡಿಗೆ ಬೇಕಾದ ವಷ್ಟ್ರ ವಿನ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸುವುವ ಅವಶ್ಯಕತೆ ಇಲ್ಲ. ಉತ್ತಮವಾದ ನೃತ್ಯ ಪ್ರದರ್ಶನ ಇದ್ದರೆ ಸಾಕು.
ನೃತ್ಯ ತಂಡಗಳು ಸಿ ಡಿ ಅಲ್ಲಿ ಅಡಕವಾದ ನೃತ್ಯ ಪ್ರದರ್ಶನವನ್ನು ಕಳುಹಿಸಬೇಕಾದ ವಿಳಾಸ ಪಾತರಗಿತ್ತಿ,72,72 ನೇ ಅಡ್ಡ ರಸ್ತೆ,5 ನೇ ಬ್ಲಾಕ್,ರಾಜಾಜಿನಗರ,ಬೆಂಗಳೂರು 560 010. ಮೊಬೈಲ್ ದೂರವಾಣಿ 9481043159,9066614123 ಸಂಪರ್ಕಿಸಹಬುದು.
ಪಾತರಗಿತ್ತಿ ಕನ್ನಡ ಸಿನೆಮಾ ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್ ಈ ಚಿತ್ರದ ಸಹ ನಿರ್ಮಾಪಕರು. ಪಾತರಗಿತ್ತಿ ಚಿತ್ರದ ಕಥೆ,ಚಿತ್ರಕಥೆ,ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು.
ಪಾತರಗಿತ್ತಿ ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಬಹುತೇಕ ಪೂರೈಸಿ ಅಸುನೀಗಿದರು,ಅವರ ಕೆಲಸವನ್ನು ಸಮೀರ ಕುಲಕರ್ಣಿ ಅವರು ಪೂರ್ತಿಗೊಳಿಸಿದ್ದಾರೆ.
ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು.ನಾಯಕನಾಗಿ ಶ್ರೀಕಿ,ನಾಯಕಿ ಆಗಿ ಪ್ರಜ್ಜು ಪೂವಯ್ಯ ಇದ್ದಾರೆ
Follow us on Google News and stay updated with the latest!
-
Contact at support@indiaglitz.com
Comments