ಪಾತರಗಿತ್ತಿ ಒಂದು ಹಾಡು ಬಾಕಿ
Send us your feedback to audioarticles@vaarta.com
ಈ ತಿಂಗಳಿನ ಅಂತ್ಯದಲ್ಲಿ ಒಂದು ಹಾಡನ್ನು ಚಿತ್ರೀಕರಿಸಿಕೊಂಡರೆ ಪಾತರಗಿತ್ತಿ ಚಿತ್ರದ ಚಿತ್ರೀಕರಣ ಮುಗಿದಂತೆ. 38 ದಿವಸಗಳಲ್ಲಿ ಮಾತಿನ ಭಾಗದ ಹಾಗೂ ಕೆಲವು ಹಾಡುಗಳ ಚಿತ್ರೀಕರಣ ಮಾಡಿರುವ ನಿರ್ದೇಶಕ ಈಶ್ವರ್ ಅವರು ಉಳಿದ ಒಂದು ಹಾಡನ್ನು ಅಭಿಮನ್ ಸ್ಟುಡಿಯೋ ಹಾಗೂ ಇನ್ನೋವಟಿವ್ ಸಿಟಿ ಅಲ್ಲಿ ಚಿತ್ರಿಸಿಕೊಳ್ಳಲಿದ್ದಾರೆ.
ಪಾತರಗಿತ್ತಿ ಕನ್ನಡ ಸಿನೆಮಾ ಚಿತ್ರೀಕರಣ ಮುಗಿಸಿ ರೆರೆಕಾರ್ಡಿಂಗ್, ಎಫ್ಫೆಕ್ಟ್ಸ್, ಡಿ ಐ ತಂತ್ರಜ್ಞಾನದ ಕೌಶಲ್ಯವನ್ನು ರಾಜನ್ ಅವರ ಸ್ಟುಡಿಯೋದಲ್ಲಿ ಅಳವಡಿಸಿಕೊಂಡಿರುವ ಈ ಚಿತ್ರ ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ. ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್, ಶಿವಣ್ಣ ಸ್ನೇಹಿತರು ಈ ಚಿತ್ರದ ಸಹ ನಿರ್ಮಾಪಕರು. ಪಾತರಗಿತ್ತಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು.
ಪಾತರಗಿತ್ತಿ ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಬಹುತೇಕ ಪೂರೈಸಿ ಅಸುನೀಗಿದರು. ಉಳಿದ ಸಂಗೀತದ ಕೆಲಸವನ್ನು ಸಮೀರ ಕುಲಕರ್ಣಿ ಅವರು ಪೂರ್ತಿಗೊಳಿಸಿದ್ದಾರೆ. ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು.
ನಾಯಕನಾಗಿ ಶ್ರೀಕಿ, ನಾಯಕಿ ಆಗಿ ಪ್ರಜ್ಜು ಪೂವಯ್ಯ ಇದ್ದಾರೆ. ತಬಲಾ ನಾಣಿ, ಭವ್ಯ, ರಾಮಕೃಷ್ಣ, ಲಕ್ಕಿ ಶಂಕರ್, ರಾಜು ತಾಳಿಕೋಟೆ, ಲಯೆನ್ದ್ರ, ಮಿತ್ರ, ಬುಲ್ಲೆಟ್ ಪ್ರಕಾಷ್, ಪೊತ್ರೆ ನಾಗರಾಜ್, ಬ್ರಹ್ಮವರ್, ಶಾಂತಮ್ಮ, ಚಿಕ್ಕಣ್ಣ, ಕುರಿ ಪ್ರತಾಪ್,ರಾಮನಯಕ್, ನೀಲಕಂಠ ಸ್ವಾಮಿ ಪೋಷಕ ಪಾತ್ರಗಳಲ್ಲಿ ಇದ್ದಾರೆ. ಶಕೀಲಾ ಒಂದು ಹಾಡಿಗೆ ಬಂದು ಕುಣಿದು ಕುಪ್ಪಳಿಸಿದ್ದಾರೆ.
ಗಣೇಶ್ ಎಂ ಅವರ ಸಂಕಲನ, ಮದನ್ ಹರಿಣಿ, ಸದಾ ರಾಘವ್, ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ,ಮಾಸ್ ಮಾಧ ಅವರ ಸಾಹಸ, ಕೆ ವಿ ರಾವ್ ಅವರ ಕಲೆ ಈ ಚಿತ್ರಕ್ಕಿದೆ.
Follow us on Google News and stay updated with the latest!
Comments