ಪವರ್ ಹಾಗೂ ಟವರ್

  • IndiaGlitz, [Tuesday,December 31 2013]

ಸಂದರ್ಭಕ್ಕೆ ಸರಿಯಾಗಿ ಮಾತನಾಡುವುದು ಅಷ್ಟು ಸುಲಬದ ವಿಚಾರ ಅಲ್ಲ. ರಮೇಶ್ ಅರವಿಂದ್ ಅವರು ಅದರಲ್ಲಿ ಮೇಲ್ಪಂಕ್ತಿಯಲ್ಲಿ ಇರುವವರು. ಆದರೆ ನಿನ್ನೆ ನಮ್ಮ ಶಿವಣ್ಣ ಸಹ ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟರು. ಮೊದಲಿಗೆ ಪವರ್ ಹಾಗೂ ಟವರ್ ವಿಚಾರ ಹೇಳುವುದಾದರೆ ಶಿವಣ್ಣ ತಮ್ಮನ್ನನು ಉದ್ದೇಶಿಸಿ ಪವರ್ ಅಂದರು ಹಾಗೆ ನಾಯಕಿ ಏರಿಕ ಫೆರ್ನಾಂಡೇಜ್ ಅವರ್ ಅಭಿನಯವನ್ನು ಹಾಡುಗಳಲ್ಲಿ ಸನ್ನಿವೇಶಗಳನ್ನು ಆಗಷ್ಟೇ ನೋಡಿದ್ದ ಶಿವಣ್ಣ ಅವರನ್ನು ಟವರ್ ಎಂದು ಪ್ರಾಸಬದ್ದರಾದರು.

ಅಂದು ಶಿವಣ್ಣ ತಮ್ಮ ಸಹೋದರನನ್ನು ಕುರಿತು ಹೇಳಿದ ಮಾತುಗಳು ಸಮಂಜಸವೆ ಆಗಿತ್ತು. ಪುನೀತ್ ಇಂದಲೇ ನಾನು ಅಭಿನಯಕ್ಕೆ ಬಂದಿದ್ದು ಅವನ ಹಾಡು ಕೇಳಿ ಅಭಿನಯ ಬಾಲ ನಟನಾಗಿ ನಾನು ಮಾರುಹೋಗಿದ್ದೆ. ನನಗೆ ಅಭಿನಯ ಒಗ್ಗೋಲ್ಲ ಅಂತ ‘ಶ್ರೀ ನಿವಾಸ ಕಲ್ಯಾಣ’ ಸೆಟ್ ಇಂದ ನಾನು ಆಚೆಯೂ ಬಾಲ ನಟನಾಗಿ ಬಂದಿದ್ದೆ. ಅದರ ನನ್ನ ತಮ್ಮ ಹಾಗೆ ಮಾಡಲಿಲ್ಲ. ಎಲ್ಲವನ್ನೂ ಶ್ರದ್ದೆ ಇಂದ ಕಂಡ. ಅದು ಅವನಿಗೆ ಇವತ್ತಿಗೂ ರಕ್ಷಣೆಗೆ ಬಂದಿದೆ. ಅದು ‘ಅಪ್ಪು’ ಸಿನೆಮಾ ನೋಡುತ್ತಿದ್ದಾಗ ನಾನು ನನ್ನ ಇನ್ನೊಬ್ಬ ಸಹೋದರ ರಾಘವೇಂದ್ರ ಜೊತೆ ಸೇರಿ ಈ ಪುನೀತ್ಗೆ ಪವರ್ ಸ್ಟಾರ್ ಅಂದರೆ ಚನ್ನಾಗಿರುತ್ತೆ ಅಂದಿದ್ದೆ ಇಂದಿಗೂ ಅದಕ್ಕೆ ತಕ್ಕ ಹಾಗೆ ನನ್ನ ಸಹೋದರ ಇದ್ದಾನೆ ಎಂದು ಶಿವಣ್ಣ ನೆನೆದರು.

ಇಂದು ಆಕಾಶದಿಂದ ಸ್ಕೈ ಡೈವಿಂಗ್ ನನ್ನ ಸಹೋದರ ಮೊದಲ ಬಾರಿಗೆ ಮಾಡಿದ್ದಾನೆ ಅಂದರೆ ಅದು ಮೊದಲು ಖುಷಿ ಅನುಭವಿಸುವನು ನಾನು.‘ನಿನ್ನಿಂದಲೇ’ ಟ್ರೈಲರ್, ಹಾಡುಗಳನ್ನು ನೋಡಿದೆ ಅದನ್ನು ನೋಡಿಯೇ ನಾನು ಅದೆಷ್ಟು ಬೇಗ ಸಿನೆಮಾ ನೋಡಬಹುದು ಅಂದು ಲೆಕ್ಕ ಹಾಕಿದೆ. ಅದರೆ ಬಿಡುಗಡೆ ಸಮಯದಲ್ಲಿ ನಾನು ಸಿಂಗಪೂರದಲ್ಲಿ ‘ಆರ್ಯನ್’ ಚಿತ್ರೀಕರಣದಲ್ಲಿ ಇರುತ್ತೇನಲ್ಲ ಅಂದು ಹೇಳಿಕೊಂಡರು ಶಿವಣ್ಣ.

ಇನ್ನೂ ಟವರ್ ವಿಚಾರಕ್ಕೆ ಬಂದರೆ ನಾಯಕಿ ಏರಿಕ ಅವರ ಅಭಿನಯ, ಅವರ ನೋಟ, ನಿಲುವು ನೋಡಿ ಶಿವಣ್ಣ ಟವರ್ ಅಂದದ್ದು. ಹಾಗೆ ನೋಡಿದರೆ ಆ ಟವರ್ ಅ