ನೀನಾದೆ ನಾ ಸಂಪೂರ್ಣ
Send us your feedback to audioarticles@vaarta.com
ನೀನಾದೆ ನಾ ಒಂದು ಸಂಪೂರ್ಣ ಕುಟುಂಬದ ಸಿನೆಮಾ ಅಂದು ಕೊಂಡ ದಿವಸಗಳಿಗಿಂತ ಎರಡು ದಿವಸ ಮುಂಚೆಯೇ ಚಿತ್ರೀಕರಣ ಮುಗಿಸಿದೆ. ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಶಾಲಾ ಬಾಲಕನ ಪಾತ್ರವನ್ನು ಚಿತೃಕರಿಸಿಕೊಳ್ಳುವುದರೊಂದಿಗೆ ಡೈನಾಮಿಕ್ ವಿಷನ್ಸ್ ಲಾಂಛನದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅರ್ಪಿಸುವ ಚಂದ್ರದೇವರಾಜ್ ಅವರು ನಿರ್ಮಿಸುತ್ತಿರುವ ನೀನಾದೆ ನಾ ಚಿತ್ರ ಸಧ್ಯಕ್ಕೆಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡನೆ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಕಂದಾಸ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರಜ್ವಲ್ ದೇವರಾಜ್, ಪ್ರಿಯಾಂಕ ಕಂಡ್ವಾಲ್ ಹಾಗೂ ಅಂಕಿತಾ ಮಹೇಶ್ವರಿ ಈ ಚಿತ್ರದ ನಾಯಕಿಯರು.
ಅವಿನಾಶ್, ಬುಲೆಟ್ಪ್ರಕಾಶ್, ಕೆ.ಎಸ್.ಶ್ರೀಧರ್, ಪವಿತ್ರಲೋಕೇಶ್, ಪನ್ನಗಾಭರಣ, ಯತಿರಾಜ್, ಅಭಿಜಿತ್ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.
ಅರ್ಜುನ್ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶ್ರೀನಿವಾಸ್ರಾಮಯ್ಯರ ಛಾಯಾಗ್ರಹಣವಿದೆ. ಸುರೇಶ್ ಸಂಕಲನ, ಥ್ರಿಲ್ಲರ್ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹಾಗೂ ಕಂದಾಸ್ ಸಂಭಾಷಣೆ ಬರೆದಿದ್ದಾರೆ. ಪ್ರಣಾಮ್ ದೇವರಾಜ್ ಈ ಚಿತ್ರದ ಸಹ ನಿರ್ಮಾಪಕರು.
Follow us on Google News and stay updated with the latest!
-
Contact at support@indiaglitz.com
Comments