ನವಂಬರ್ ನಲ್ಲಿ ಅಭಿಮನ್ಯು

  • IndiaGlitz, [Thursday,October 09 2014]

ಒಂದು ಕಡೆ ಸಿನೆಮಾಗಳ ಬಿಡುಗಡೆಗೆ ಚಿತ್ರಮಂದಿರಗಳ ಅಭಾವ,ಮತ್ತೊಂದು ಕಡೆ ಸೆನ್ಸಾರ್ ಆಗಲು ಕೆಲವು ತೊಂದರೆಗಳು ಅನುಭವಿಸುತ್ತಾ ಇರುವ ಕನ್ನಡ ಸಿನೆಮಗಳು ಒಂದು ರೀತಿಯಲ್ಲಿ ಅಡ ಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡ ಹಾಗಿದೆ. ಸಿನೆಮಾ ಬಿಡುಗಡೆ ಮಾಡುವಂತಿಲ್ಲ,ಬಿಡುಗಡೆ ಮಾಡಲು ಪಸಂದಾದ ವ್ಯವಸ್ಥೆ ಇಲ್ಲದೆ ಇರುವುದು. ಪರಭಾಷಾ ಸಿನೆಮಗಳೇ ಕರ್ನಾಟಕದಲ್ಲಿ ಬಹಳ ಈಸೀ ಆಗಿ ಬಿಡುಗಡೆ ಆಗುತ್ತಾ ಇದೆ. ಈ ಎಲ್ಲ ರುಚಿಯನ್ನು ಅನುಭವಿಸಬೇಕಿದೆ ಅರ್ಜುನ್ ಅವರಅಭಿಮನ್ಯು.ಒಂದು ರೀತಿಯಲ್ಲಿ ಅಭಿಮನ್ಯು ಹ್ಯಾಗೆ ಚಕ್ರವ್ಯೂಹ ಬೇಡಿಸಿ ರಣರಂಗದಲ್ಲಿ ಸೆಣಸಾಡಿದನೋ ಅದೇ ರೀತಿ ಅರ್ಜುನ್ ಅವರಿಗೆ ಆಗಿದೆ.

ಶ್ರೀರಾಂ ಫ಼ಿಲಂ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಅಭಿಮನ್ಯು ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ನವಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅರ್ಜುನ್ ಸರ್ಜಾ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣವಿರುವ ಅಭಿಮನ್ಯು ಚಿತ್ರವನ್ನು ಅರ್ಜುನ್ ಸರ್ಜಾ ಅವರೇ ನಿರ್ಮಿಸಿದ್ದಾರೆ.

ಕೆ.ಕೆ ಸಂಕಲನ,ಶಶಿಧರ್ ಅಡಪ ಕಲಾನಿರ್ದೇಶನ,ರಾಜುಸುಂದರಂ ನೃತ್ಯ ನಿರ್ದೇಶನ ಹಾಗೂ ಶಿವಾರ್ಜುನ್ ರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ

ಅರ್ಜುನ್ ಸರ್ಜಾ,ಸುರ್ವಿನ್ ಚಾವ್ಲಾ,ರವಿಕಾಳೆ,ಸಿಮ್ರಾನ್ ಕಪೂರ್,ರಾಹುಲ್ ದೇವ್,ಬಿರಾದಾರ್,ಜಹಂಗೀರ್,ವಿನಯಾಪ್ರಸಾದ್,ಸತೀಶ್ ಮುಂತಾದವರಿದ್ದಾರೆ.