ತುಂಡ್ ಹೈಕ್ಳ ಮಾತು
Send us your feedback to audioarticles@vaarta.com
ತುಂಡ್ ಹೈಕ್ಲ ಸಾವಾಸ ಮೂರು ಹೊತ್ತು ಉಪವಾಸ.... ಎಂಬ ಯೋಗರಾಜ ಭಟ್ಟರ ಹಾಡಿನ ಸಾಲನ್ನೇ ಶೀರ್ಷಿಕೆ ಆಗಿ ಮಾಡಿಕೊಂಡು ಈಗ ಚಿತ್ರೀಕರಣ ಮುಗಿಸಿ ತುಂಡ್ ಹೈಕ್ಲ ಸಾವಾಸ ಮಾತುಗಳ ಜೋಡಣೆ ಸಹ ಮುಗಿಸಿದೆ.
ಶ್ರೀ ಶಿರಡಿ ಸಾಯಿ ಎಂಟರ್ಟ್ರೈನರ್ಸ್ ಲಾಂಛನದಲ್ಲಿ ಜಿ.ಎನ್,. ರುದ್ರೇಶ್,ಎಂ. ಶಂಕರೇಗೌಡ, ಶ್ಯಾಮ್ ಜಿಗಳಿ, ಕೂಡಿ ನಿರ್ಮಿಸುತ್ತಿರುವ ತುಂಡ್ ಹೈಕ್ಳ ಸಾವಾಸ ಚಿತ್ರಕ್ಕೆ ಕಿಶೋರ್, ವಿದರ್ಶ, ಸಾಧುಕೋಕಿಲ, ಮುಂತಾದವರು ಅಭಿನಯದೊಂದಿಗೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿತು. ಗಿರಿರಾಜ್ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ - ಕಿರಣ್ ಹಂಪಾಪುರ, ಸಂಗೀತ - ಆಶ್ಲೆ ಅಭಿಲಾಶ್, ಸಂಕಲನ - ಕೆ.ಎಂ.ಪ್ರಕಾಶ್, ಕಲೆ-ಇಸ್ಮಾಯಿಲ್, ನೃತ್ಯ - ಮದನ್-ಹರಿಣಿ, ಸಾಹಸ - ಡಿಫರೆಂಟ್ ಡ್ಯಾನಿ, ಮಾಸ್ ಮಾದ, ಸಾಹಿತ್ಯ - ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಗಿರಿರಾಜ್, ನಿರ್ವಹಣೆ - ಸೋಮಶೇಖರ್. ಸಿ.ಕುಮಾರಸ್ವಾಮಿ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಕಿಶೋರ್, ವಿದರ್ಶ, ಸಾಧುಕೋಕಿಲ, ಶಕೀಲ, ಅಭಿನಯಶ್ರೀ, ಐಸಾಕ್ ವರ್ಗೀಸ್, ಗಿರಿ, ವಿನೋದ್, ವೈಶಾಲಿ ದೀಪಕ್, ಶಂಕರ್, ಕಿರಣ್ ನಾಯಕ್, ಶಶಿಧರ್ ಮುಂತಾದವರಿದ್ದಾರೆ.
Follow us on Google News and stay updated with the latest!
Comments