ತಾವರೆಕೆರೆಯಲ್ಲಿ ಲವ್ ಹಾಡು
Send us your feedback to audioarticles@vaarta.com
ಶ್ರೀಗುರು ಮಂತ್ರಾಲಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂಜೀವ್ ಶೆಟ್ಟಿ, ವೆಂಕಟೇಶ್.ಎಸ್ ಹಾಗೂ ಪಿ.ಎನ್.ಶ್ರೀನಾಥ್ ಅವರು ನಿರ್ಮಿಸುತ್ತಿರುವ ಲವ್ ಆನ್ ಎನ್ ಎಚ್ 4 ಚಿತ್ರಕ್ಕಾಗಿ ಶ್ರೀನಾಥ್ ಅವರು ಬರೆದಿರುವ ಎಣ್ಣೆ ಎಣ್ಣೆ ಏರಿತು. ನಿಶದ ಕಿಕ್ ನ ಮುಂದೆ ಹೆಣ್ಣಿನ ನಿಶ ಕೂಡ ಜೀರೋ ಕಣೋ ಎಂಬ ಹಾಡಿನ ಚಿತ್ರೀಕರಣ ತಾವರೆಕೆರೆಯ ಭೂತಬಂಗಲೆಯಲ್ಲಿ ನಡೆದಿದೆ. ನಾಯಕರಾದ ಅಕುಲ್ ತಿಲಕ್, ನೃತ್ಯ ನಿರ್ದೇಶಕ ಫ಼ೈವ್ ಸ್ಟಾರ್ ಗಣೇಶ್ ಹಾಗೂ ನಟ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸುಮಾರು ೨೫ಲಕ್ಷದ ಅದ್ದೂರಿ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಫೈವ್ ಸ್ಟಾರ್ ಗಣೇಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ಮತ್ತೊಂದು ಚಿತ್ರದಲ್ಲಿ ನಾಯಕರಾಗಿ ಅಭಿನಯಿಸುತ್ತಿರುವ ನೃತ್ಯ ನಿರ್ದೇಶಕ ಫ಼ೈವ್ ಸ್ಟಾರ್ ಗಣೇಶ್ ಆ ಚಿತ್ರ ಮುಗಿಯುವ ತನಕ ಯಾವ ಚಿತ್ರದಲ್ಲೂ ತಾವು ಕಾಣಿಸಿಕೊಳ್ಳುವುದಿಲ್ಲವೆಂದು ನಿರ್ಮಾಪಕರಿಗೆ ಬರೆದುಕೊಟ್ಟಿದರಂತೆ. ಲವ್ oಟಿ ಓಊ೪ ಚಿತ್ರದ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿರುವ ಸಂದರ್ಭದಲ್ಲಿ ಹಾಡಿನ ಜೋಶ್ ಗೆ ಮೈಮರೆತು ತಮ್ಮ ನಿರ್ಮಾಪಕರ ಬಳಿ ಮನವಿ ಮಾಡಿಕೊಂಡು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಜೋಗಿ ಪ್ರೇಮ್ ಅವರು ಈ ಹಾಡನ್ನು ಹಾಡಿದ್ದಾರೆ. ಇಬ್ಬರು ನಾಯಕರು ಅಭಿನಯಿಸಿರುವ ಈ ಹಾಡಿಗೆ ಇಬ್ಬರ ಧ್ವನಿಯಲ್ಲೂ ಪ್ರೇಮ್ ಅವರೇ ಹಾಡಿರುವುದು ವಿಶೇಷ.
ಮೈಸೂರಿನ ಪತ್ರಕರ್ತ ಪಿ.ಎನ್.ಶ್ರೀನಾಥ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಪಿ.ಎನ್.ಶ್ರೀನಾಥ್ ಅವರೇ ಚಿತ್ರದ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಫ಼ೈವ್ ಸ್ಟಾರ್ ಗಣೇಶ್, ಇಮ್ರಾನ್ ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್
Follow us on Google News and stay updated with the latest!
-
Contact at support@indiaglitz.com
Comments