ಗೆದ್ದು ಬಂದ ಅಭಿಮನ್ಯು
- IndiaGlitz, [Tuesday,November 11 2014]
ಆ ಮಹಾಭಾರತ ಅರ್ಜುನನ ಅಭಿಮನ್ಯು ಗೆದ್ದು ಬರಲಿಲ್ಲ. ಚಕ್ರವ್ಯೂಹದೊಳಗೆ ನುಗ್ಗಿ ಆಚೆ ಬರಲು ಆಗಲಿಲ್ಲ. ಆದರೆ ಇಂದಿಗೂ ಚಕ್ರವ್ಯೂಹ ಬೇದಿಸಿದಕ್ಕೆ ಅಭಿಮನ್ಯು ನೆನಪಿನಲ್ಲಿ ಉಳಿಯುತ್ತಾನೆ.
ಇಂದಿನ ಭಾರತದ ಅಭಿಮನ್ಯು ಸಧ್ಯಕ್ಕೆ ಅರ್ಜುನ್ ಅರ್ಥಾತ್ ನಟ,ನಿರ್ದೇಶಕ,ನಿರ್ಮಾಪಕ,ಕಥೆ,ಚಿತ್ರಕಥೆ,ಸಂಭಾಷಣೆ ಬರೆಯುವ ಜೊತೆಗೆ ನಟ ಸಹ ಆಗಿರುವ ಅರ್ಜುನ್ ಸರ್ಜಾ. ಕನ್ನಡದ ಕುಡಿ ತಮಿಳು ಚಿತ್ರರಂಗದಲ್ಲಿ ಬೆಳಗಿ ಈಗ ಮೊದಲ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದು ಭಾಗಶಃ ಗೆದ್ದಿದೆ.ಅಭಿಮನ್ಯು ಇಂದಿನ ಕಾಲಕ್ಕೆ 20 ಕೋಟಿ ನುಗ್ಗಿ ಬರಬೇಕು.
ಅರ್ಜುನ್ ಸಾರ್ಥಕ ಮನೋಭಾವ ಇಂದ ಇದ್ದಾರೆ. ಅಂದು ಒಬ್ಬನೇ ಒಬ್ಬನೇ ಮಂಜುನಾತನೊಬ್ಬನೇ ಎಂದು ಶ್ರೀ ಮಂಜುನಾಥ ಸಿನಿಮಾಕ್ಕೆ ಹಾಡಿ ಕುಣಿದ ಅರ್ಜುನ್ ಕಳೆದ ಸೋಮವಾರ ಸಹ ಒಬ್ಬರೇ ಬಂದಿದ್ದರು. ಜೊತೆಗೆ ಪುಟ್ಟ ಹುಡುಗಿ ಯುವಿನ್ ಸಹ ಕುಳಿತ್ತಿದ್ದರು. ಈ ಹುಡುಗಿಯ ಪಾತ್ರ ಸಹ ಸಕ್ಕರೆಯಂತೆ ಸಿಹಿ ಆದರೆ ಕಹಿ ಆಗುವುದು ಅಮ್ಮ ಹಾಕಿದ ವಿಷದ ಊಟ ಮಾಡಿದ ಮೇಲೆ ಅಭಿಮನ್ಯು ಸಿನಿಮಾದಲ್ಲಿ.
ಸಾರ್ವಜನಿಕರು,ವಿದ್ಯಾರ್ಥಿಗಳಿಂದ ತುಂಬು ಹೃದಯದ ಶ್ಲಾಘನೆ ಸಿಕ್ಕಿದೆ. ಎಷ್ಟೋ ಮಂದಿ ನಾವು ಅಂತಹ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ವಿಧ್ಯೆ ಯಾರೊಬ್ಬರ ಸೊತ್ತು ಅಲ್ಲ. ಇಂತಹ ಸಿನಿಮಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ,ಮಾಜಿ ರಾಷ್ಟ್ರಪತಿ ಡಾಕ್ಟರ್ ಅಬ್ದುಲ್ ಕಲಾಂ,ಕರ್ನಾಟಕದ ಮುಖ್ಯಮಂತ್ರಿ ಅವರಿಗೆ ಈ ಸಿನಿಮಾ ವೀಕ್ಷಣೆಗೆ ಅರ್ಜುನ್ ಆಹ್ವಾನಿಸಲಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಈ ಬದಲಾವಣೆ ಬೇಕು ಎಂಬ ಮಾತು ಕೇಳಿಬರುತ್ತಿದೆ. 73% ಮಕ್ಕಳು ಸರ್ಕಾರಿ ಶಾಲೆ ಅಲ್ಲಿ ಓದುತ್ತಿದ್ದಾರೆ. ಇವರೆಲ್ಲರ ಪಾಡು ಬಹಳ ಖೇದನಿಯ. ಅರ್ಜುನ್ ಮಾತನಾಡುತ್ತಾ ಹೋದರು. ಹಣಕ್ಕಾಗಿ ಈ ಸಿನಿಮಾ ಮಾಡಿಲ್ಲ,ಸಂತೋಷಕ್ಕಾಗò