ಗಣಪ 22 ದಿವಸಗಳ ರಿ-ರೆಕಾರ್ಡಿಂಗ್
Send us your feedback to audioarticles@vaarta.com
ಪಿ 2 ಎಂಟರ್ಟೈನ್ಮೆಂಟ್ ಅಡಿಯಲ್ಲಿ ಪ್ರೇಮ್ ಹಾಗೂ ಪರಮೇಶ್ ಅವರು ನಿರ್ಮಿಸಿರುವ ಚಿತ್ರ ಗಣಪ ಚಿತ್ರಕ್ಕೆ22 ದಿವಸಗಳ ರಿ-ರೆಕಾರ್ಡಿಂಗ್ ಕೆಲಸವನ್ನು ಪ್ರಸಾದ್ ಸ್ಟುಡಿಯೋ ಅಲ್ಲಿ ಮಾಡಲಾಗಿದೆ. ತಾಂತ್ರಿಕ ಗುಣಮಟ್ಟ ಹೆಚ್ಚಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡಲಾಗಿದ್ದು ಚಿತ್ರಕ್ಕೆ ನೈಜ ವಾದ್ಯಗಳನ್ನೇ ಬಳಸಿಕೊಳ್ಳಲಾಗಿದೆ. ಸಿನಿಮದ ಕಥಾ ವಸ್ತು ಸಹ ನೈಜತೆಗೆ ಬಹಳ ಹತ್ತಿರವಾದದ್ದು. ಮುಗ್ದ ಪ್ರೇಮಿ ಒಬ್ಬ ಗಣಪ ಖಳರಿಗೆ ಮೈ ನಡುಕ ಹುಟ್ಟಿಸಬಲ್ಲ ಹಿನ್ನಲೆ ಹೊಂದಿರುವವನು. ಆದ್ರೂ ಅವನ ಸೋಲು ಪ್ರೀತಿಗೆ ಮಾತ್ರ. ಈ ಪ್ರೀತಿ ಅನ್ನೋದು ಅವನಿಗೆ ಹೇಗೆ ತಲೆ ಕೆಡಸಿ ಪ್ರೇಮ ಕಥೆ ಸಾಗುತ್ತದೆ ಎಂಬುದನ್ನೂ ನೀವು ತೆರೆಯ ಮೇಲೆ ನೋಡಬೇಕು.
112 ದಿವಸಗಳ ಚಿತ್ರೀಕರಣ ಚೆನ್ನೈ,ಬೆಂಗಳೂರು,ಮುಂಬೈ,ಮದುರೈ,ಕಾರೈಕುಡಿ ಸ್ಥಳಗಳಲ್ಲಿ ಪ್ರಭು ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ನಡೆಸಲಾಗಿದ್ದು ಆನಂತರ ಚಿತ್ರೆತರ ಚಟುವಟಿಕೆಗಳನ್ನು ಪೂರೈಸಿಕೊಂಡು ಇದೀಗ ಮೊದಲ ಪ್ರತಿಯನ್ನು ಹೊರತಂದಿದೆ. ಸಧ್ಯದಲ್ಲೇ ಗಣಪ ಸೆನ್ಸಾರ್ ಮುಂದೆ ಸಹ ಹೋಗಲಿದೆ.
ಗಣಪ ಚಿತ್ರದ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಹ ದೊರಕಿಸಿಕೊಂಡಿದೆ.ಈ ಚಿತ್ರಕ್ಕಾಗಿ ನಾಯಕ ಸಂತೋಷ್ ಅವರು ವಿಶೇಷ ತರಬೇತಿಯನ್ನು ಮಾಡಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಪ್ರಿಯಾಂಕ ಚಿತ್ರದ ಕಥಾ ನಾಯಕಿ. ನಿರ್ದೇಶಕ ಪ್ರಭು ಶ್ರೀ ನಿವಾಸ್ ಈ ಹಿಂದೆ ಜೀವ ಸಿನೆಮಾ ನಿರ್ದೇಶನ ಮಾಡಿದವರು, ಗಣಪ ಚಿತ್ರಕ್ಕೆ ಅನೇಕ ಹೊಸ ಪ್ರತಿಬೆಗಳನ್ನು ಪರಿಚಯ ಮಾಡಿದ್ದಾರೆ. ಪೆಟ್ರೋಲ್ ಪ್ರಸನ್ನ ಹಾಗೂ ಸುಚಿತ್ರಾ (ಡಿಸ್ಕೋ ಶಾಂತಿ ಸಹೋದರಿ) ಅವರಿಗೆ ಒಂದು ಹಾಡು ಸಹ ಈ ಚಿತ್ರದಲ್ಲಿ ಇದೆ.
ಕರಣ್ ಬಿ ಕೃಪಾ ಅವರ ಸಂಗೀತ,ಶ್ರೀ ನಿವಾಸ್ ದೇವಸಂ ಅವರ ಛಾಯಾಗ್ರಹಣ,ಜೋನಿ ಹರ್ಷ ಅವರ ಸಂಕಲನ,ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ,ಡಿಫರೆಂಟ್ ಡ್ಯಾನಿ,ಮಾಸ್ ಮ&
Follow us on Google News and stay updated with the latest!
-
Contact at support@indiaglitz.com
Comments