ಗಜಪಡೆ ನಡೆ
Send us your feedback to audioarticles@vaarta.com
ಆನೆ ನಡೆದದ್ದೇ ದಾರಿ ಎಂಬ ಮಾತಿದೆ. ಹಾಗೆ ಹಣ ಇರೋರು ಮಾಡಿದ್ದೆ ಸಿನೆಮಾ ಎಂಬ ಹೇಳಿಕೆ ಸಹ ಮಾಡಬಹುದು. ಅದೇನು ಉತ್ಸಾಹ ಇಂದ ಶುರು ಮಾಡ್ತಾರೆ ಆದರೆ ಬಿಡುಗಡೆ ಸಮಯಕ್ಕೆ ಪಾಪ ನಿರ್ಮಾಪಕನ ಜೆಬಲ್ಲಿ ಹಣ ಮಾಯಾ. ಈ ಕಡೆ ಅವರಿಗೆ ಪ್ರೋತ್ಸಾಹದ ಕೊರತೆ,ಉಧ್ಯಮದಲ್ಲಿ ಯಾರು ಕೇಳುವವರು ಇರುವುದೇ ಇಲ್ಲ. ಆದರೂ ಹೊಸ ಸಿನೆಮಗಳು ಸೆಟ್ಟೇರುತ್ತಲೆ ಇರುತ್ತದೆ. ಲಕ್ಷ್ಮಿ ಇದ್ದರೆ ಸಾಲದು ಸರಸ್ವತಿ ಸಹ ಇರಬೇಕು ಎಂಬ ಮಾತು ಕೇಳಿದ್ದೇವೆ. ಈಗ ಬೇಕಾಗಿರುವುದು ಧೈರ್ಯ ಲಕ್ಷ್ಮಿಯ ಗುಣ.
ಮತ್ತೊಂದು ಹೊಸಬರ ತಂಡ ಕುಂಚಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಘವೇಂದ್ರ,ಮುತ್ತುರಾಯಪ್ಪ,ಅಣ್ಣಯ್ಯ ಉಪವೀರ್,ಸ್ನೇಹಿತರೊಂದಿಗೆ,ಕೂಡಿ ನಿರ್ಮಿಸುತ್ತಿರುವ ಗಜಪಡೆ ಚಿತ್ರದ ಚಿತ್ರೀಕರಣ ರಾಜರಾಜೇಶ್ವರಿನಗರದಲ್ಲಿ ನಡೆಯುತ್ತಿದೆ.
ಹರ್ಷ,ಅರುಣ್,ಸಿದ್ದೇಶ್,ತನ್ಮಯಿ,ಮೋನಿಷ,ಪಾಲ್ಗೊಂಡಿದ್ದ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರದ ಛಾಯಾಗ್ರಹಣ ಶಂಕರ್,ಸಂಗೀತ- ಅಭಿಲಾಷ್,ಜೋಯಲ್,ಸಂಕಲನ-ಲಿಂಗರಾಜು,ಸಾಹಸ-ಚಂದ್ರು,ಸಹ ನಿರ್ದೇಶನ-ಭಜರಂಗಿ ಮಂಜು,ಕೋ-ಡೈರೆಕ್ಟರ್- ಗಿರೀಶ್ ಕರುನಾಡು,
ತಾರಾಗಣದಲ್ಲಿ ಹರ್ಷ,ಅರುಣ್,ಸಿದ್ದೇಶ್,ತನ್ಮಯಿ,ಮೋನಿಷ,ಸಾಧುಕೋಕಿಲ,ಭರತ್ ಭೂಷಣ್,ಹಿಮೇಶ್,ಕೆಂಪೇಗೌಡ,ಮಹದೇವ್,ಡ್ಯಾನಿ,ವಿನಯ್ ಗೌಡ ಮುಂತಾದವರಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments