ಖಾಯಿಲೆ ಅಲ್ಲೂ ಇಲ್ಲೂ!

  • IndiaGlitz, [Saturday,April 12 2014]

ಡಾಕ್ಟರ್ ಅಂಬರೀಶ್ ಶ್ವಾಸಕೋಶ ಸೋಂಕು ಖಾಯಿಲೆ ಇಂದ ಚೇತರಿಸಿಕೊಂಡು ನಿನ್ನೆ ಶುಕ್ರವಾರ ಬೆಂಗಳೂರಿಗಿ 50 ದಿವಸಗಳ ಅನಾರೋಗ್ಯದಿಂದ ವಾಪಸ್ಸಾದರೆ ಕನ್ನಡ ಸಿನೆಮಾ ಖಾಯಿಲೆ ಮಾತ್ರ ಕಡಿಮೆ ಆಗಿಲ್ಲ. ಅದು ಪೇಲವ ಸೋಲಿನ ಖಾಯಿಲೆ ಎಂದು ಹೇಳಬೇಕಾಗಿಲ್ಲ. ಎನ್ ಖಾಯಿಲೆ ಸಾಯೋಲೆ ಅಂತ ಹೇಳೋದು ಬೇಡ. ಎಂತ ಖಾಯಿಲೆಗೂ ಈಗ ಮದ್ದು ಉಂಟು!

ನಿನ್ನೆ ಶುಕ್ರವಾರ ಮಾತ್ರ ಬಿಡುಗಡೆ ಆದ ಮೂರು ಸಿನೆಮಗಳಲ್ಲಿ ಎರಡು ಸಿನೆಮಗಳಂತು‘ಖಾಯಿಲೆ’ ಪ್ರಸ್ತಾಪ ಮಾಡಿದೆ. ಮೊದಲು ‘ಖಾಯಿಲೆ’...ಎಂಬ ಹಾಡು ಹೊಸ ನಾಯಕ ವಿವೇಕ್ ನರಸಿಂಹನ್ ‘ಎಂದೆಂದೂ ನಿನಗಾಗಿ’ ಸಿನೆಮಾದಲ್ಲಿ ಎಲ್ಲರಿಗೆ ಖಾಲಿಯೇನೆ ಹಿಡಿಸಿ ಬಿಡುತ್ತಾನೆ. ಆ ಹಾಡಿನಲ್ಲಿ ಎಲ್ಲರಿಗೂ ಭುಜ ಕುಣಿಸುವ ಖಾಯಿಲೆ. ತಮಿಳಿನ ಎಂಗೆಯುಮ್ ಎಪ್ಪೋತುಂ ಸಿನೆಮಾದ ರೀಮೇಕ್ ಅಪಘಾತದ ಬಗ್ಗೆ ಚಿತ್ರಿಸಲಾಗಿದ್ದು ಅಲ್ಲಿ ಎರಡು ಜೋಡಿಗಳಿಗೂ ಒಂತಾರ ಖಾಯಿಲೆ. ಕೊನೆಗೆ ನಾಯಕ ಖಾಯಿಲೆ ಇಂದ ಸಾಯದೆ ಅಪಘಾತದಿಂದ ಸಾಯುವನು. ಗೊಳೋ ಅಂತ ನಾಯಕಿ ದೀಪ ಸನ್ನಿಧಿ ಅಳುವಾಗಲಂತೂ ಅಳುವಿನ ಖಾಯಿಲೆ ಅಂಟಿಕೊಂಡರು ಆಶ್ಚರ್ಯವೇನಲ್ಲ, ಅಷ್ಟು ಚನ್ನಾಗಿ ದೀಪ ಸನ್ನಿಧಿ ಅತ್ತಿದ್ದಾರೆ.

ವಾರದ ಮತ್ತೊಂದು ಸಿನೆಮಾ ‘ಅತಿ ಅಪರೂಪ’ ಸಿನೆಮಾದಲ್ಲಿ ನಾಯಕಿ ಐಂದ್ರಿತಾ ರಾಯ್ ಅವರಿಗೆ ಖಾಯಿಲೆ. ಅದು ಕೋಟಿಗೊಬ್ಬರಿಗೆ ಬರುವ ಖಾಯಿಲೆ ನಮ್ಮ ನಾಯಕಿಗೆ ಬಂದಿದೆ. ಏನಪ್ಪಾ ಅದು ಖಾಯಿಲೆ ಅಂತ ಮಾತ್ರ ನೀವು ಕೇಳುವಂತಿಲ್ಲ. ಯಾಕಪ್ಪಾ ಅಂದರೆ ಅದು ನಿರ್ದೇಶಕ ದಿನೇಷ್ ಬಾಬು ಅವರಿಗೆ ಗೊತ್ತಿದ್ದರೆ ತಾನೇ ನಮಗೆ ಪರದೆಯ ಮೇಲೆ ಹೇಳಕ್ಕೆ.

ಈ ನಾಯಕಿಗೆ ಬರುವ ಖಾಯಿಲೆ ಇಂದಲೇ ಅವಳು ನಾಯಕಗನಿಗೆ ನಾಳೆಗಳಿಗೆ ಕರೆದುಕೊಂಡು ಹೋಗುವುದಕ್ಕಾಗುವುದಿಲ್ಲ ಎಂದು ನಿನ್ನೆಯ ದಿನಗಳನ್ನು ಪರಿಚಯಿಸುತ್ತಾಳೆ. ಅದು ಪುಟ್ಟ ಪರದೆಯ ಮೇಲೆ ತನ್ನ ಬಾಲ್ಯದ ದಿನಗಳನ್ನು ಹೇಳುತ್ತಾ ಹೋಗುತ್ತಾಳೆ.

ತನ್ನ ಮುದ್ದಿನ ಮೊಮ್ಮಗಳ ಖಾಯಿಲೆ ಇಂದ ಸಾವನ್ನು ನೋಡಲು ಆಗದೆ ತಾತ ಸದಾಶಿವ ಬ್ರಹ&#

More News