ಖಾತರ್ನಾಕ್ ಕೂಡ ರಿವೈಸಿಂಗ್
- IndiaGlitz, [Friday,October 25 2013]
ಕನ್ನಡ ಚಿತ್ರಗಳು ಸೆನ್ಸಾರ್ ಹತ್ತಿರ ಸದ್ದು ಮಾಡಿ ಸ್ವಲ್ಪ ಕಿರಿಕ್ ಮಾಡಿಕೊಂಡಿದ್ದು ಇದೆ. ಈಗ ಖತರ್ನಾಕ್ ಸರದಿ. ಪ್ರದೇಶಿಕ ಸೆನ್ಸಾರ್ ಮಂಡಳಿ ಅರ್ಹತಾ ಪತ್ರದೊಂದಿಗೆ ಒಂದು ಡಜನ್ ಕಟ್ಗಳನ್ನು ಸೂಚಿಸಿತು ನೋಡಿ ಖತರ್ನಾಕ್ ತಂಡ ಸಾಕಪ್ಪ ನಿಮ್ಮ ಸಹವಾಸ ಎಂದು ನಾವು ರಿವೈಸಿಂಗ್ ಕಮಿಟಿಗೆ ಹೋಗುವುದಾಗಿ ಎದ್ದು ಬಂದಿದೆ.
ಒಂದಂತು ಸತ್ಯ. ಸೆನ್ಸಾರ್ ಮಂಡಳಿ ದೇಶದ ಪೂರಾ ಒಂದೇ ಪಾಲಿಸಿ ಅಂತೂ ಇಟ್ಟುಕೊಂಡಿಲ್ಲ. ಇಲ್ಲಿ ಕಟ್ ಅನ್ನುವುದು ಇನ್ನೆಲ್ಲೋ ಬಿಟ್ ಹಾಕುತ್ತಾರೆ. ಈ ಗೊಂದಲಮಯ ಸ್ತಿತಿಯಿಂದಲೇ ನಿರ್ಮಾಪಕರುಗಳು ನಿರ್ದೇಶಕರುಗಳು ಬೇಜಾರು ಸಹ ಮಾಡಿಕೊಳ್ಳುವುದು. ಆದರೆ ಸೆನ್ಸಾರ್ ಕೊಡುವ ಕಾರಣ ಸಹ ಅಷ್ಟೇ ಒಪ್ಪುವ ಹಾಗೆಯೇ ಇದೆ.
ಮೊದಲು ಉಮೇಶ್ ರೆಡ್ಡಿ ಎಂದು ಹೆಸರು ಇಟ್ಟುಕೊಂಡು ಚಿತ್ರೀಕರಣ ಪ್ರಾರಂಬಿಸಿತು ಆದರೆ ಯಾವಾಗ ಉಮೇಶ್ ರೆಡ್ಡಿ ಪದಕ್ಕೆ ರೆಡ್ ಇಂಟು ಮಾರ್ಕ್ ಬಳೆದು ಸಿನೆಮಾ ಕೋರ್ಟ್ ಮೆಟ್ಟಿಲು ಏರಿತೋ ಖತರ್ನಾಕ್ ಸಿನೆಮಾದ ನಿರ್ದೇಶಕ ಮಳವಳ್ಳಿ ಸಾಯಿ ಕೃಷ್ಣ ಸಹ ಹುಷಾರ್ ಆದರೂ. ಹಾಗಾಗಿ ಅವರು ಚಿತ್ರದ ಶೀರ್ಷಿಕೆಯನ್ನೆ ಬದಲಿಸದರು. ಆದರೆ ಚಿತ್ರದ ಕಂಟೆಂಟ್ ಸೈಕೋಪಾತ್ ಕಿಲ್ಲರ್ ಉಮೇಶ್ ರೆಡ್ಡಿ ಮಾಡಿದ ಕೃತ್ಯಗಳಿಗೆ ಸಂಬಂದಿಸಿದ್ದು. ಎರಡು ಸಿನೆಮಗಳು ಒಂದೇ ವ್ಯಕ್ತಿಯ ಸಿನೆಮಾ ಬೇರೆ ವಿಚಾರ.
ಖತರ್ನಾಕ್ ಆದಿತ್ಯ ರಮೇಶ್ ಅವರ ನಿರ್ಮಾಣದ ಚಿತ್ರ. ಮಳವಳ್ಳಿ ಸಾಯಿಕೃಷ್ಣ ಅವರೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವರು. ಎಂ ಆರ್ ಸೀನು ಛಾಯಾಗ್ರಹಣ ಸಾಧು ಕೋಕಿಲ ಅವರ ಸಂಗೀತವಿದೆ.
ಉಮೇಶ್ ರೆಡ್ಡಿ ಪಾತ್ರವನ್ನು ರವಿ ಕಾಳೆ ಮಾಡಿದ್ದಾರೆ. ರೂಪಿಕಾ ಬುಲ್ಲೆಟ್ ಪ್ರಕಾಷ್ ಮುರಳಿ ಮೋಹನ್ ತುಳಸಿ ಶಿವಮಣಿ ರವೀಂದ್ರನಾಥ್ ತುಮಕೂರ್ ಮೋಹನ್ ಶೋಬಾ ರಾಘವೇಂದ್ರ ಹಾಗೂ ಇತರರು ಇದ್ದಾರೆ.