ಕೋಮಲ್ ಕವಿತಾಲಯ ಆಶ್ರಯ!
Send us your feedback to audioarticles@vaarta.com
ಕನ್ನಡದ ಹೆಸರಾಂತ ನಟ ಕೋಮಲ್ ಕುಮಾರ್ ಅವರು ಈ ಹಿಂದೆ ನನ್ನ 100ನೇ ಸಿನೆಮಾ ತಮಿಳಿನಲ್ಲಿ ಮೊದಲನೇ ಸಿನೆಮಾ ಎಂದು ಹೇಳಿಕೊಂಡಿದ್ದರು. ಅದಕ್ಕೊಂದು ಸಣ್ಣ ಬದಲಾವಣೆ. ಕೋಮಲ್ ಅಂದುಕೊಂಡ ಸಿನೆಮಾ ಆರು ತಿಂಗಳು ಮುಂದೆ ಹೋಗುತ್ತಿರುವುದರಿಂದ ಅವರಿಗೆ ಹೆಸರಾಂತ ಬ್ಯಾನ್ನರ್ ಕವಿತಾಲಯ ಚಿತ್ರ ಕೆ ಬಾಲಚಂದರ್ ಅವರ ಸಂಸ್ಥೆ ಇಂದ ಆಹ್ವಾನ ಬಂದಿದೆ.
ಭರತ್ ನಾಯಕ ಆಗಿರುವ ಕವಿತಾಲಯ ಚಿತ್ರ ಸಂಸ್ಥೆ ಅಡಿಯಲ್ಲಿ ಕೆ ಬಿ ಅವರ ಮಗಳು ಪುಷ್ಪ ಕಂಧಸ್ವಾಮಿ ಅವರು ನಿರ್ಮಿಸಲು ಹೊರಟಿರುವ ಚಿತ್ರದಲ್ಲಿ ಕೋಮಲ್ ಅವರಿಗೆ ಕಾಮಿಡಿ ಪಾತ್ರ.
ಕೋಮಲ್ ಅವರಿಗೆ ಕವಿತಾಲಯ ಅಂತಹ ದೊಡ್ಡ ಸಂಸ್ಥೆ ಇಂಡಿಯ ಆಹ್ವಾನ ಬಂದಾಗ ಕುಶಿ ಜೊತೆ ಭಯ ಸಹ ಆಯಿತು. ಕಾರಣ ಬಂದಂತಹ ಆಹ್ವಾನ. ಎಂತೆಂತಹ ದೊಡ್ಡ ನಟರುಗಳು ರಜನಿಕಾಂತ್, ಕಮಲಹಾಸನ್, ರಮೇಶ್ ಅರವಿಂದ್, ಪ್ರಕಾಷ್ ರಾಜ್ ಮತ್ತು ಇತರ ನಟರುಗಳು ಇಲ್ಲಿಂದ ಪಾದ ಬೆಳಸಿದವರು. ಆಹಾ ನನಗೂ ಒಂದು ಒಳ್ಳೆ ಸಂಸ್ಥೆಯಿಂದ ಮೊದಲ ತಮಿಳು ಸಿನೆಮಕ್ಕೆ ಬಂದಿದೆಯಲ್ಲ ಎಂದು ಸಂತೋಷ. ಭಯ ಯಾಕಪ್ಪಾ ಅಂದರ ಸಂಭಾಷಣೆ ಅರ್ಥ ಮಾಡಿಕೊಂಡು ಸಹ ಕಲಾವಿದರ ಜೊತೆಗೆ ಸರಿಯಾದ ಸ್ಪಂದನೆ ಆಗಬೇಕು, ಅದರಲ್ಲಿ ಏನಾದರೂ ಯಡವಟ್ಟು ಆದರೆ ಎಂಬ ಸಣ್ಣ ಭಯ. ಕೋಮಲ್ ಅವರಿಗೆ ಕನ್ನಡ ಅಲ್ಲದೆ, ತೆಲುಗು, ತಮಿಳು ಭಾಷೆಗಳು ಮತ್ತು ಹಿಂದಿ, ಇಂಗ್ಲೀಷ್ ಚನ್ನಾಗಿಯೇ ಅರ್ಥ ಆಗುತ್ತೆ.
ಕೋಮಲ್ ಅವರಿಗೆ ಪಿ ವಾಸು ಅವರು ಆಪ್ತ ರಕ್ಷಕ ಸಿನೆಮಾ ನಿರ್ದೇಶನ ಮಾಡುತ್ತಿರುವಾಗ ನೀವು ಎಂದಾದರೂ ತಮಿಳು ಭಾಷೆಗೆ ಬಂದೆ ಬರ್ತೀರಾ ಎಂದು. ಅದು ಈಗ ನಿಜವಾಗುತ್ತಿದೆ. ಪಿ ವಾಸು ಅವರೇ ಕೋಮಲ್ ಅವರನ್ನು ತಮಿಳಿಗಿ ಆಹ್ವಾನಿಸಿದ್ದರು. ಆದರೆ ಕಾಲ್ ಶೀಟ್ ಅಡ್ಜಸ್ಟ್ ಆಗದೆ ಕೋಮಲ್ ಅವರು ಕನ್ನಡದಲ್ಲಿಯೇ ಉಳಿದು ಬಿಟ್ಟರು.
ಕವಿತಾಲಯ ಸಂಸ್ಥೆ ಈಗಾಗಲೇ ಕೋಮಲ್ ಅವರ ಉಡುಪಿನ ಅಳತೆ ಸಹ ತೆಗೆದು ಕೊಂಡು ಹೋಗಿದ್ದಾರೆ. ಇನ್ನೆನಿದ್ದರೂ ಚಿತ್ರೀಕರಣ ಪ್ರಾರಂಭವಾಗಬೇಕು ಅಷ್ಟೇ.
Follow us on Google News and stay updated with the latest!
-
Contact at support@indiaglitz.com
Comments