ಕೋತಿರಾಜನ ಕಥೆ ಈಗ ಸಿನೆಮಾ
Send us your feedback to audioarticles@vaarta.com
ಸಾಮಾನ್ಯ ಜನರ ಮಧ್ಯೆ ಇರುವಂತಹ ಅಸಾಮಾನ್ಯ ಪ್ರತಿಭೆಗಳು ಎಂದು ಹಲವರನ್ನು ನಾವು ಗುರ್ತಿಸಬಹುದು. ಅಂತಹ ಅಸಮಾನ್ಯ ಶಕ್ತಿ ಹೊಂದಿರುವ ವ್ಯಕ್ತಿಯೊಬ್ಬನ ಕಥೆಯನ್ನಾಧರಿಸಿ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಕೋತಿರಾಮ ಎಂದೇ ಹೆಸರಾದ ಚಿತ್ರದುರ್ಗದ ಕೋತಿರಾಜ ವಾಲ್ಕ್ಲೈಂಬಿಂಗ್ನಲ್ಲಿ ಜಗದ್ವಿಖ್ಯಾತಿ ಗಳಿಸಿದ್ದಾರೆ. ಅವರ ಸಾಹಸದ ಜೀವನ ಕುರಿತಾಗಿ ಚಿತ್ರವೊಂದನ್ನು ವಿ.ಜಿ.ಫಿಲಂಸ್ ಲಾಂಛನದಲ್ಲಿ ಶ್ರೀಮತಿ ಶೈಲಾಡೇವಿಡ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೇ ತಿಂಗಳ ೨೩ ರಿಂದ ಪ್ರಾರಂಭವಾಗಲಿದೆ.
ಈ ಕೋತಿರಾಜನ ಜೀವನದಲ್ಲಿ ನಡೆದಂತಹ ಕೆಲ ನೈಜಘಟನೆಗಳನ್ನು ಬಳಸಿಕೊಂಡು ಸಿನಿಮ್ಯಾಟಿಕ್ ಆಗಿ ಜೋತಿ ಅಲಿಯಾಸ್ ಕೋತಿರಾಜ ಎಂಬ ಹೆಸರಿನಿಂದ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವವರು ಸೆಬಾಸ್ಟಿನ್ ಡೇವಿಡ್ ಅವರು. ಈ ಚಿತ್ರದಲ್ಲಿ ಫ್ರೀ ರನ್ನರ್ಸ್ ವಿಭಾಗದಲ್ಲಿ ಖ್ಯಾತರಾದ ಚಹಾಣ್ ತಂಡದವರ ಸಾಹಸ ಕೂಡ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುವುದು.
ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಸೆವೆನ್ಸ್ಟಾರ್ ಭಾಸ್ಕರ್ ಸಂಗೀತ, ನಾಗೇಶ್.ಎನ್ ಸಂಭಾಷಣೆ ಮತ್ತು ಸಹ ನಿರ್ದೇಶನ,ಡಾ ದೊಡ್ಡರಂಗೇಗೌಡ, ಶ್ರೀಚಂದ್ರ,ನಾಗೇಶ್ ಸಾಹಿತ್ಯ, ಸ್ವಾಮಿ ಸಂಕಲನ, ಕುಂಗ್ಫೂ ಬಾಬು ಸಾಹಸ, ತ್ರಿಭುವನ್, ಚಾಮರಾಜ್ ನೃತ್ಯನಿರ್ದೇಶನ, ಜಿ.ಮೂರ್ತಿ ಕಲಾನಿರ್ದೇಶನವಿದೆ. ಜ್ಯೋತಿರಾಜ್ (ಕೋತಿರಾಜ್),ಐಶಾನಿ, ದೀಪಿಕದಾಸ್, ರಮೇಶ್ ಭಟ್, ಸಂಕೇತ್ ಕಾಶಿ, ಲಕ್ಷ್ಮೀಚಂದ್ರಶೇಖರ್, ಜಯಲಕ್ಷ್ಮೀ, ಶೋಭಲೋಲನಾಥ್ ತಾರಾಬಳಗದಲ್ಲಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments