ಕೃಷ್ಣ-ಲೀಲಾ ಮುಕ್ತಾಯ
Send us your feedback to audioarticles@vaarta.com
ಹೆಚ್ಚು ಸದ್ದು ಮಾಡದೆ ನಿರ್ದೇಶಕ ಶಷಾಂಕ್ ಈ ಬಾರಿ ಕೃಷ್ಣ ಲೀಲ ಚಿತ್ರವನ್ನು ಸಿದ್ದ ಮಾಡಿದ್ದಾರೆ. ಆರಂಬದಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಸುದ್ದಿ ಮಾಡಿದ್ದರು. ಈಗ ಸಿನೆಮಾ ಚಿತ್ರೀಕರಣ ಮುಗಿಸಿದ್ದಾರೆ.
ಸ್ಯಾಂಡಲ್ ವುಡ್ ಕೃಷ್ಣ, ಅಜಯ್ ರಾವ್ ಚೊಚ್ಚಲ ನಿರ್ಮಾಣದ ಶ್ರೀ ಕೃಷ್ಣ ಆರ್ಟ್ಸ್ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಬಚ್ಚನ್ ನಂತರ, ಶಶಾಂಕ್ ನಿರ್ದೇಶಿಸುತ್ತಿರುವ ಅದ್ದೂರಿ ಚಿತ್ರ ಕೃಷ್ಣ-ಲೀಲಾ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕಳೆದ ಇಪತ್ತು ದಿನದಿಂದ ನಡೆದ ಎರಡನೇ ಹಂತದ ಚಿತ್ರೀಕರಣದಲ್ಲಿ ನಾಯಕ ಅಜಯ್ ರಾವ್, ನಾಯಕಿ ಮಯೂರಿ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಬ್ ರಾಜ್, ಅಚ್ಯುತ್ ಕುಮಾರ್, ತಬಲಾನಾಣಿ ಮುಂತಾದ ಕಲಾವಿದರು ಅಭಿನಯಿಸಿದ ದೃಶ್ಯಗಳನ್ನು ಬೆಂಗಳೂರಿನ ಸುತ್ತ ಮುತ್ತಲಿನ ಹಲವಾರು ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರೀಕರಣದ ಸ್ಥಳದಲ್ಲಿಯೇ ಆನ್ ಲೈನ್ ಎಡಿಟಿಂಗ್ ನಡೆಯುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು, ಚಿತ್ರೀಕರಣದ ಜೊತೆಗೆ ಚಿತ್ರದ ಸಂಕಲನ ಕಾರ್ಯವೂ ಕೂಡ ಮುಕ್ತಾಯಗೊಂಡಿದೆ. ಇದೇ ತಿಂಗಳ ಹದಿನೇಳರಿಂದ ಚಿತ್ರದ ಡಬ್ಬಿಂಗ್ ಕಾರ್ಯವು ಪ್ರಾರಂಭವಾಗಲಿದ್ದು,ಆಗಸ್ಟ್ ಎರಡನೇ ವಾರದಲ್ಲಿ ಆರಂಭವಾಗುವ ಅಂತಿಮ ಹಂತದ ಚಿತ್ರೀಕರಣದಲ್ಲಿ ಫೈಟ್ ಹಾಗು ಹಾಡುಗಳ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್ ನಲ್ಲಿ ತೆರೆಗೆ ಬರಲು ತಯಾರಾಗುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ಹಾಗು ಶೇಖರ್ ಚಂದ್ರ ಛಾಯಾಗ್ರಹಣವಿದೆ.
Follow us on Google News and stay updated with the latest!
-
Contact at support@indiaglitz.com
Comments