ಕಿಟ್ಟಿ-ನಿಖಿತಾ ಜೋಡಿ
Send us your feedback to audioarticles@vaarta.com
ಶ್ರೀನಗರ ಕಿಟ್ಟಿ ಕನ್ನಡದ ಜನಪ್ರಿಯ ನಟ ಈಗ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಜನಪ್ರಿಯ ಆಗಿರುವ ನಿಖಿತಾ ನಾರಾಯಣ್ ಜೋಡಿ ಆಗಿ ಅಭಿನಯಿಸಲಿರುವ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
ನಿರ್ಮಾಪಕ ಲಕ್ಷ್ಮಣ್ ನಾಯಕ್ ಹಾಗೂ ನಿರ್ದೇಶಕ ರಾಜಶೇಖರ್ ಅವರಿಬ್ಬರಿಗೂ ಎರಡನೇ ಕನ್ನಡ ಸಿನೆಮಾ ಪ್ರೊಡಕ್ಷನ್ ನಂ 2 ಅಡಿಯಲ್ಲಿ ಕಳೆದ ಗುರುವಾರ ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳ ರೆಕಾರ್ಡಿಂಗ್ ಪೂಜೆಯನ್ನು ನೆರವೇರಿಸಿಕೊಂಡಿದೆ.
ಎಸ್ ಜಿ ಎಲ್ ಅಡಿಯಲ್ಲಿ ನಿರ್ಮಾಪಕ ಡಿ ಲಕ್ಷ್ಮಣ್ ನಾಯಕ್ ಅವರು ನಿರ್ಮಿಸುತ್ತಿರುವವರು ಈ ಹಿಂದೆ ಆಶಾಕಿರಣಗಳು ಎಂಬ ಚಿತ್ರ ನಿರ್ಮಿಸಿದ್ದರು. ಈ ಸಿನೆಮಕ್ಕೆ ನಿರ್ಮಾಪಕರದೆ ಕಥೆ. ದಾವಣಗೆರೆಯ ಬಸವಪಟ್ನದ ನಾಯಕ್ ಅವರು ತಹಶೀಲ್ದಾರ್ ಅದವರು ಮೂಲತಃ ಕತೆಗಾರರು.
ನಿರ್ದೇಶಕ ರಾಜಶೇಖರ್ ಅವರು ಮೂರು ವರ್ಷಗಳ ಹಿಂದೆ ಈ ಸಂಭಾಷಣೆ ಸಿನೆಮಾ ನಿರ್ದೇಶನಮಾಡಿದವರು. ಈ ಟಿ ವಿ ಅಲ್ಲಿ ಕೆಲಸ ವಹಿಸಿ ನಿರ್ದೇಶಕರಾದ ರಾಜಶೇಖರ್ ಅವರು ತೆಲುಗು ಸಿನೆಮಾ ನುವ್ವು ನೇನ ಚಿತ್ರಕಥೆ ಮಾಡಿದ ಅನುಭವ ಸಹ ಹೊಂದಿದ್ದಾರೆ. ಈಗ ಕೈಗೆತ್ತಿಕೊಂಡಿರುವ ಸಿನೆಮಾ ಒಂದು ಪ್ರೇಮಕಥೆ, ಸಸ್ಪೆನ್ಸ್, ತ್ರಿಲ್ ಅಲ್ಲದೆ ಸುಮಧುರ ಹಾಡುಗಳನ್ನು ಹೊಂದಿದೆ.
ಈ ಸಿನೆಮದಿಂದ ಶ್ರೀನಗರ ಕಿಟ್ಟಿ ಜೊತೆ ನಾಯಕಿ ಆಗಿ ನಿಖಿತಾ ನಾರಾಯಣ್ ಆಗಮನವಾಗುತ್ತಿದೆ. ತಮಿಳಿನಲ್ಲಿ 3 ಹಾಗೂ ತೆಲುಗು ಭಾಷೆಯಲ್ಲಿ ಆರು ಸಿನೆಮಗಳನ್ನು ಪೂರ್ತಿಗೊಳಿಸಿರುವ ನಿಖಿತಾ ನಾರಾಯಣ್ 2006 ರಲ್ಲಿ ಮಿಸ್ ಸೌತ್ ಪ್ರಶಸ್ತಿಯನ್ನು ಪಡೆದವರು.
ಎಚ್ ಕೆ ಚಿದಾನಂದ್ ಅವರ ಛಾಯಾಗ್ರಹಣ ಕೆ ಎಂ ಪ್ರಕಾಷ್ ಅವರ ಸಂಕಲನ ಇರುವ ಈ ಚಿತ್ರವೂ ಜನವರಿ 19ರಂದುಪ್ರಾರಂಭವಾಗಲಿದೆ. ಶರತ್ ಬಾಬು, ತಬ್ಲ ನಾಣಿ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments