ಕಾಲಭೈರವ ಚಿತ್ರೀಕರಣ ಮುಕ್ತಾಯ
- IndiaGlitz, [Friday,January 10 2014]
ಶ್ರೀ. ಜೈ ಭುವನೇಶ್ವರಿ ಆರ್ಟ್ಸ್ ಲಾಂಛನದಲ್ಲಿ ತಮ್ಮಯ್ಯ-ಕುಮರೇಶ್Âಬಾಬು ನಿರ್ಮಾಣದಲ್ಲಿ ಶಿವಪ್ರಭು ನಿರ್ದೇಶಿಸುತ್ತಿರುವ ಕಾಲಭೈರವ ಚಿತ್ರಕ್ಕೆ ಗುಬ್ಬಿತಾಲ್ಲೂಕಿನ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗ ೧೦೦ಕ್ಕೂ ಹೆಚ್ಚು ಜಾನಪದ ಕಲಾವಿದರು ೫೦ ಜನ ನೃತ್ಯಗಾರರೊಂದಿಗೆ ನಟ ಯೋಗೇಶ್ ಅಭಿನಯದಲ್ಲಿ ನೀನೇ ಮಹಾರಾಜ, ನೀನೇ ರವಿತೇಜ ನೀ ಹೋಗೋ ದಾರೀಲಿ ಸಿಡಿಲಿದೆ, ಮೀರಿ ಹೋದಾಗ ಸುಖವಿದೆ ಡಾ.ವಿ.ನಾಗೇಂದ್ರಪ್ರಸಾದ್ ರಚಿಸಿದ ಅರವಿಂದ್ ನೃತ್ಯ ನಿರ್ದೇಶನದಲ್ಲಿ ನಡೆದ ಹಾಡಿನ ದೃಶ್ಯದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು.
ಈ ಚಿತ್ರಕ್ಕೆ ಛಾಯಾಗ್ರಹಣ-ನಾಗೇಶ್ವರ ರಾವ್, ಸಂಗೀತ - ಜೆಸ್ಸಿಗಿಫ್ಟ್, ಸಹನಿರ್ದೇಶನ-ಕಾಂತರಾಜಬೇವ, ಸಂಕಲನ - ಅಕ್ಷಯ್ ಪಿ ರಾವ್, ಸಾಹಸ - ರವಿವರ್ಮ, ನಿರ್ವಹಣೆ - ಗಂಡಸಿ ರಾಜು, ತಾರಾಗಣದಲ್ಲಿ-ಯೋಗೀಶ್,ಅಖಿಲಾ ಕಿಶೋರ್,ಮೇಸ್ತ್ರಿ ಬಾಲು, ರಂಗಾಯಣ ರಘು, ಶರತ್ ಲೋಹಿತಾಶ್ವ, ಸುಚೀಂದ್ರ ಪ್ರಸಾದ್, ನೀನಾಸಂ ಅಶ್ವತ್, ಮಾಳವಿಕ, ಸಾಧು ಕೋಕಿಲ, ಮುಂತಾದವರಿದ್ದಾರೆ.