ಕಾಂಜೀ ಪಿಂಜಿ ಮುಕ್ತಾಯ
Send us your feedback to audioarticles@vaarta.com
ಕಾಂಜೀ ಅಂಡ್ ಪಿಂಜಿ ಅಂತ ಆಡು ಭಾಷೆಯಲ್ಲಿ ಹೇಳುವುದು ಇದೆ. ಸಣ್ಣ ಮಟ್ಟದ ವಿಚಾರಕ್ಕೆ ಈ ಪ್ರಸ್ತಾಪನೆ ಇದೆ. ಆದರೆ ಸಿನೆಮಾ ಮಂದಿ ಅವರು ನೋಡಿ ಮ್ಯಾಡ್ ಲವ್ ಅಂತಾರೆ,ಪ್ರೀತಿಯೇ ನಿನ್ನ ಉಸಿರು ಅಂತಲೂ ಅಂತಾರೆ,ಹಾಗೆ ಪ್ರೀತಿಗೆ ಬೇರೆ ಬೇರೆ ಅರ್ಥ ಸಹ ಕೊಡುತ್ತಾರೆ. ಈಗ ನೋಡಿದರೆ ಪ್ರೀತಿಗೆ ಕಾಂಜೀ ಪಿಂಜಿ ಲವ್ ಅಂತ ಹೇಳಲು ಹೊರಟಿದ್ದಾರೆ. ಜೀವನದ ಮುಂದೆ ಲವ್ ಕಾಂಜೀ ಪಿಂಜಿಯೆ ಸರಿ ಬಿಡಿ.
ಕಾಂಜೀ ಪಿಂಜಿ ಲವ್ ಕನ್ನಡ ಸಿನೆಮ ಮಾತುಗಳ ಜೋಡಣೆ ಕೆಲಸ ಮುಕ್ತಾಯವಾಗಿದೆ ಎಂದು ನಿರ್ದೇಶಕ ಭದ್ರಾವತಿ ರಾಮಕೃಷ್ಣ ಅವರು ತಿಳಿಸಿದ್ದಾರೆ. ಈ ಹಿಂದೆ ಚಿತ್ರಕ್ಕೆ ಹೃದಯ ಕಣೆ ಹೃದಯ ಕಣೆ..ಇದು ಪ್ರೀತಿ ಕೊಡುವ ಹೃದಯ ಕಣೆ... ಹಾಡಿನ ಚಿತ್ರೀಕರಣವನ್ನು ನಾಯಕ ವಿಜಯ್ ಹಾಗೂ ದೀಪಿಕ ದಾಸ್ ಅಭಿನಯದಲ್ಲಿ ಜೆ ಪಿ ಉಧ್ಯಾನವನದಲ್ಲಿ ಚಿತ್ರಿಕರಿಸಿಕೊಳ್ಳಲಾಯಿತು. ಅಕುಲ್ ಅವರು ನೃತ್ಯ ನಿರ್ದೇಶನ ಮಾಡಿದರು. ಈ ಹಾಡಿಗೆ ಸಾಹಿತ್ಯವನ್ನು ನಿರ್ದೇಶಕ ಭದ್ರಾವತಿ ರಾಮಕೃಷ್ಣ ಅವರೇ ಒದಗಿಸಿದ್ದಾರೆ.
ಭದ್ರಾವತಿ ರಾಮಕೃಷ್ಣ ಅವರ ಪ್ರಥಮ ನಿರ್ದೇಶನದ ಚಿತ್ರ ಕಾಂಜೀ ಪಿಂಜಿ ಲವ್;..ಆದ್ರೂ ಸ್ವಲ್ಪ ಸೀರಿಯಸ್,ಭದ್ರಾವತಿ ನಿವಾಸಿಗಳಾದ ಅಕ್ಬರ್,ಕುಮಾರ್ ಹಾಗೂ ಶರಿಫ್ ಅವರ ಪ್ರಥಮ ನಿರ್ಮಾಣದ ಚಿತ್ರ.
ಭದ್ರಾವತಿ ರಾಮಕೃಷ್ಣ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಸಹ ರಚಿಸಿದ್ದಾರೆ. ಧ್ರುವ ರಾಜ್ ಅವರ ಸಂಗೀತ ಇದೆ.ಪ್ರಮೋದ್ ಅವರ ಛಾಯಾಗ್ರಹಣ,ಧ್ರುವ ರಾಜ್ ಅವರ ಸಂಗೀತ,ಪವನ್ ಕುಮಾರ್ ಅವರ ಸಂಕಲನ,ಸುಪ್ರೀಂ ಸುಬ್ಬು ಅವರ ಸಾಹಸ,
ನೃತ್ಯ ಪಟು ವಿಜಯ್ ಈ ಚಿತ್ರದ ನಾಯಕ,ದೀಪಿಕ ದಾಸ್ ಕಥಾ ನಾಯಕಿ. ಅಪ್ಪು ವೆಂಕಟೇಶ್,ಸತ್ಯಜಿತ್,ಅವಿನಾಷ್,ರಂಗಸ್ವಾಮಿ,ಕಾಶಿ,ಮನದೀಪ್ ರಾಯ್,ಎಂ ಎಸ್ ಉಮೇಶ್ ಸಹ ತಾರಗಣದಲ್ಲಿ ಇದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments