ಕನ್ನಡಕ್ಕೆ ತೀವ್ರ ಪೈಪೋಟಿ!
- IndiaGlitz, [Thursday,October 31 2013]
ಈ ವಾರ ಅಂದರೆ ರಾಜ್ಯೋತ್ಸವದ ದಿನ ಎರಡು ಕನ್ನಡ ಸಿನೆಮಗಳು ದೀಪಾವಳಿಗೂ ಮುಂಚೆ ಬಿಡುಗಡೆ ಆಗುತ್ತಿದೆ. ಆದರೆ ಇವೆರೆಡು ಸಿನೆಮಗಳು ತಮಿಳಿನಿಂದ ಮೂರು ಹಿಂದಿಯಿಂದ ಒಂದು ಹಾಗೂ ಮುಂದಿನ ವಾರದಲ್ಲಿ ತೆಲುಗು ಇಂದ ಒಂದು ಸಿನೆಮಗಳನ್ನು ಎದುರಿಸಬೇಕಿದೆ.
ಕರ್ನಾಟಕದಲ್ಲಿ ಈಗಂತೂ ಎಷ್ಟು ಪ್ರಿಂಟ್ ಪರಭಾಷಾ ಚಿತ್ರಗಳದು ಇರಬೇಕು ಎಂಬುದಕ್ಕೆ ಕಡಿವಾಣವೆ ಇಲ್ಲ. ಒಂದು ಸಾವಿರ ಕೋಟಿ ಬಾಚಲು ಮುಂದಾಗಿರುವ ಕ್ರಿಶ್ 3 ಹೃತಿಕ್ ರೋಶನ್ ಅಭಿನಯದ್ದು ಮೂರು ಕನ್ನಡ ಭಾಷೆ ಬಲ್ಲವರು ನಟಿಸಿರುವ ತಮಿಳಿನ ತಲಾ ಅಜೀತ್ ಅವರ ಆರಂಭಂ ವಿಶಾಲ್ ಅವರ ಪಾಂಡಿಯನಾಡು ಕಾರ್ತಿಕ್ ಅವರ ಅಳಗುರಾಜ ಆ ನಂತರ ಪ್ರಿಯಾಮಣಿ ಅವರ ಚಂಡಿ ತೆಲುಗು ಭಾಷೆಯ ಸಿನೆಮಾ ಸಹ ಪೈಪೋಟಿ ನೀಡಲಿದೆ.
ಮಲ್ಟಿಪ್ಲೆಕ್ಸ್ ಸಂಸ್ಕೃತಿ ಶುರುವಾಗಿನಿಂದ ಚಿಕ್ಕ ಮರುಕಟ್ಟೆಯ ಕನ್ನಡ ಸಿನೆಮಾ ಎದುರುಸಿತ್ತಿರುವುದು ಕ್ವಾಲಿಟಿವಿಷಯವಾಗಿ. 10ರಿಂದ 50ಕೋಟಿ ವರೆವಿಗೂ ಪರಭಾಷಾ ಸಿನೆಮಗಳು ತೊಡಗಿಸಿ ಸಿನೆಮಾ ಮಾಡುತ್ತದೆ. ಅಂತಹುದರ ಮಧ್ಯೆ ಮೆಟ್ಟಿ ನಿಲ್ಲುವುದು ಸಾಮಾನ್ಯದ ವಿಚಾರ ಎನಲ್ಲ.
ಆರೇಳು ಸ್ಕ್ರೀನ್ ಇರುವ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನೆಮಗಳಿಗೆ ಒಂದೋ ಎರಡೋ ಸ್ಕ್ರೀನ್ ಸಿಗುತ್ತೆ ಆದರೆ ಕ್ವಾಲಿಟಿ ಕನ್ನಡ ಸಿನೆಮಗಳದ್ದು ಚನ್ನಾಗಿದ್ದರೆ ಮಾತ್ರ ಉಳಿಗಾಲ.
ಕನ್ನಡ ರಾಜ್ಯೋತ್ಸವಕ್ಕೆ ಹೇಳಿಕೊಳುವಂತಹ ನಟನ ಸಿನೆಮಾ ಅಂದರೆ ಅದು ಯಷ್ ಅವರ ರಾಜ ಹುಲಿ ಆದರೆ ಅದು ತಮಿಳಿನ ಸುಂದರ ಪಾಂಡಿಯನ್ ಸಿನೆಮಾದ ಅವತರಿಣಿಕೆ. ಇನ್ನೊಂದು ಸ್ಲಮ್ ಎರಡು ವರ್ಷಗಳ ಹಳೆಯ ಸಿನೆಮಾ. ಅದು ಸಹ ಪಟಿಯಾಲ ಚಿತ್ರದ ರೀಮೇಕ್ ಅಂತ ಸುದ್ದಿ ಇದೆ. ಮಾಲಾಶ್ರೀ ಅವರ ಎಲಕ್ಷನ್ಮರುಬಿಡುಗಡೆ ಭಾಗ್ಯ ರಾಜ್ಯೋತ್ಸವದಂದು ಕಾಣುತ್ತಿದೆ.