ಕ ಜನರ ಮುಂದೆ
Send us your feedback to audioarticles@vaarta.com
ಹೊಸಬರ ಸಿನಿಮಾ ಆದ್ದರಿಂದ ಏನಾದರೂ ಮಾಡಿ ವೀಕ್ಷಕರನ್ನು ಸಂಪಾದಿಸಿಕೊಳ್ಳಬೇಕು ಎಂಬ ಹಪಾಹಪಿ ಇದ್ದದ್ದೇ. ಅದನ್ನೇ ಕ ಕನ್ನಡ ಸಿನಿಮಾ ತಂಡ ಸಹ ಮಾಡುತ್ತಿದೆ.
ಕ ಅಂದರೆ ಕನ್ನಡ ಆದರೆ ಕ ಅಕ್ಷರಕ್ಕೆ ಸಿನಿಮಾದಲ್ಲಿ ಏನೇನು ಅರ್ಥ ಅಡಗಿದಿಯೋ ತಿಳಿದಿಲ್ಲ. ಸಾಯಿ ಫಿಲ್ಮ್ಸ್ಕಚಿತ್ರದ ಹಾಡುಗಳಿಂದ ಈಗಾಗಲೇ ಗೆದ್ದಿದ್ದು ಆಗಿದೆ. ಈಗ ಬಿಡುಗಡೆ ಮುಂಚೆ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಒಂದು ವಾರದ ಕಾಲ ಯಾತ್ರೆ ಬೆಳಸಲಿದೆ.
ಕರ್ನಾಟಕದ ಬಹು ಮುಖ್ಯ ಜಿಲ್ಲೆಗಳಾದ ಹುಬ್ಬಳ್ಳಿ,ಬೆಳಗಾವಿ,ದಾವಣಗೆರೆ,ಚಿತ್ರದುರ್ಗ,ಶಿವಮೊಗ್ಗ,ಹಾಸನ,ಮೈಸೂರು ಸ್ಥಳಗಳಿಗೆ ಬೇಟಿ ನೀಡಿ ಕ ಸಿನಿಮಾದ ವಿಶೇಷಗಳನ್ನು ಹೇಳಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಬರ ಮಾಡಿಕೊಳ್ಳುವ ಪ್ರಯತ್ನ ಇದೆ.
ಯು ಎ ಅರ್ಹತಾ ಪತ್ರ ಸ್ವೀಕರಿಸಿರುವ ಕ ಸಿನಿಮಾದ ನಿರ್ಮಾಪಕರು ರಾಜಮ್ಮ ಸಾಯಿ ಪ್ರಕಾಷ್.ಪ್ಯಾರ್ ರಿಸ್ಕ್ ಔರ್ ಮೋಹಬತ್...ಎಂಬ ಉಪಶೀರ್ಷಿಕೆ ಇಟ್ಟುಕೊಂಡಿದೆ.
ಕ ಚಿತ್ರದ ಧ್ವನಿ ಸುರುಳಿ ಲಹರಿ ರೆಕಾರ್ಡಿಂಗ್ ಸಂಸ್ಥೆ ಅಡಿಯಲ್ಲಿ ಬಿಡುಗಡೆ ಆಗಿದ್ದು ಹಾಡುಗಳು ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಸಾಯಿ ಕೃಷ್ಣ ಅವರು ಕ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ.
ಈ ಹಿಂದೆ ಕ್ಷಮಿಸಿ ಚಿತ್ರಕ್ಕೆ ಅವರು ಪ್ರತಿಭಾನ್ವೇಷಣೆ ಮಾಡಿದ ಕಲಾವಿದರನ್ನು ಈ ಕ ಚಿತ್ರ್ಕಕೆ ಆಯ್ಕೆ ಮಾಡಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ ಕ ಚಿತ್ರದ ನಿರ್ಮಾಪಕರು ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್.
ಶರತ್,ಮೋನಿಶ್ ನಾಗರಾಜ್,ವಿಶಾಲ್ ನಾಯರ್,ಶೈನ್ ಶೆಟ್ಟಿ ಜೊತೆಗ ಪವಿತ್ರ,ಅನುಷ,ಪಲ್ಲವಿ,ದೀಪ,ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ.
ಚಿತ್ರೀಕರಣವನ್ನು ಬೆಂಗಳೂರು,ಚಿಕ್ಕಮಗಳೂರು,ಹಾಸನ್ ಹಾಗೂ ಖಾಸಗಿ ಚಾನಲ್ &
Follow us on Google News and stay updated with the latest!
-
Contact at support@indiaglitz.com
Comments