ಕ ಈ ವಾರ
Send us your feedback to audioarticles@vaarta.com
ಕ ಅಕ್ಷರಕ್ಕೆ ಕನ್ನಡ ಅಂತ ನಾವು ನೀವು ಅಂದು ಕೊಂಡಿದ್ದೇವೆ. ಆದರ ಮೊದಲ ಪ್ರಯತ್ನದಲ್ಲಿ ಕ ಅಕ್ಷರ ಶೀರ್ಷಿಕೆ ಇಂದ ಎಂದು ಅಡಗಿಸಿ ಹೇಳಲು ಹೊರಟಿದ್ದಾರೆ ಸಾಯಿ ಕೃಷ್ಣ ಎಂಬುದು ಸಧ್ಯದ ಸಸ್ಪೆನ್ಸ್.
ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಷ್ ಅವರ ಪುತ್ರ ಸಾಯಿ ಕೃಷ್ಣ ಅವರ ಬಹು ನಿರೀಕ್ಷಿತ ಕನ್ನಡ ಚಿತ್ರ ಕ ಈ ವಾರ ಬಿಡುಗಡೆ ಆಗುತ್ತಿದೆ. ಕುತೂಹಲದ ಜೊತೆಗೆ ಈಗಿನ ಯುವಜನರ ನಾಡಿ ಮಿಡಿತವನ್ನು ಅರಿತಿರುವ ಸಾಯಿ ಕೃಷ್ಣ ಒಂದು ವಿಶೇಷ ಸಿನಿಮಾವನ್ನೇ ಮಾಡಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.
ಸಾಯಿ ಫಿಲ್ಮ್ಸ್;ಕ ಚಿತ್ರದ ಹಾಡುಗಳಿಂದ ಈಗಾಗಲೇ ಗೆದ್ದಿದ್ದು ಆಗಿದೆ. ಯು/ಎ ಅರ್ಹತಾ ಪತ್ರ ಸ್ವೀಕರಿಸಿರುವ ಕ...ಪ್ಯಾರ್ ರಿಸ್ಕ್ ಔರ್ ಮೋಹಬತ್...ಎಂಬ ಉಪಶೀರ್ಷಿಕೆ ಇಟ್ಟುಕೊಂಡಿದೆ.
ಸಾಯಿ ಕೃಷ್ಣ ಅವರು ಕ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ.
ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ ಕ ಚಿತ್ರದ ನಿರ್ಮಾಪಕರು ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್.
ಶರತ್,ಮೋನಿಶ್ ನಾಗರಾಜ್,ವಿಶಾಲ್ ನಾಯರ್,ಶೈನ್ ಶೆಟ್ಟಿ ಜೊತೆಗ ಪವಿತ್ರ,ಅನುಷ,ಪಲ್ಲವಿ,ದೀಪ,ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ. ಛಾಯಾಗ್ರಹಣ ಸ್ಟೀವ್ ಬೆಂಜಮಿನ್,ಸಂಗೀತ ಗಣೇಶ್ ನಾರಾಯಣ ಅವರದು.
Follow us on Google News and stay updated with the latest!
-
Contact at support@indiaglitz.com
Comments