ಐಟೆಮ್ ಹಾಡು ಪಾಕೆಟ್ ಮನಿ
Send us your feedback to audioarticles@vaarta.com
ಊರಿಗೆ ಬಂದವಳು ನೀರಿಗೆ ಬರ್ದೆ ಇರ್ತಾಳ ಎಂಬುದು ಗಾದೆ ಮಾತು. ಅದನ್ನೇ ಸ್ವಲ್ಪ ತಿರುಗಿಸಿ ಸಿನೆಮಕ್ಕೆ ಅಳವಡಿಸಿದರೆ ನಾಯಕಿ ಅದವಳು ಐಟೆಮ್ ಹಾಡಿಗೆ ಬರ್ದೆ ಇರ್ತಾಳ ಎಂಬುದಂತಾಗಿದೆ ಇಂದಿನ ಪರಿಸ್ಥಿತಿ.
ಈಗಿನ ಬಹುತೇಕ ನಾಯಕಿಯರು ಐಟೆಮ್ ಹಾಡಿಗೆ ಬಂದು ತಮ್ಮ ಪಾಕೆಟ್ ಮನಿ ಅನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಅಂದು ಐಟೆಮ್ ಹಾಡಿಗೆ ಭಾವನ (ಹಳೆ) ನನಗೆ ಪರ್ಸ್ ತುಂಬುತೆ ಅದಕ್ಕೆ ಈ ಐಟೆಮ್ ಹಾಡು ಎಂದು ನಿಸ್ಸಂಕೊಂಚವಾಗೆ ಹೇಳಿಕೊಂಡಿದ್ದರು.
ಈಗಂತೂ ರಮ್ಯ, ರಾಗಿಣಿ ಪೂಜಾ ಗಾಂಧಿ, ಐಂದ್ರಿತಾ ರಾಯ್ ನೀತು, ಹರ್ಷಿಕ ಪೂನಾಚ್ಚ, ಭಾವನ ವೀಣ ಭಟ್, ಡೈಸಿ ಷಾ ಅನೇಕ ನಟಿಯರು ಈ ಹಿಂದೆ ಕ್ಯಾಬರೆ ನರ್ತಕಿಯರಿಗಿಂತ ಏನು ಕಡಿಮೆ ಎಂದು ಕುಣಿದು ಕುಪ್ಪಳಿಸಿದ್ದಾರೆ.
ಈಗ ಮತ್ತೊಬ್ಬ ನಾಯಕಿ ಗಾಳಿಪಟ ನಾಯಕಿ ಭಾವನ ರಾವ್ ಸಹ ಐಟೆಮ್ ಹಾಡಿಗೆ ಕುಣಿಯಲು ಹೆಜ್ಜೆ ಹಾಕಿದ್ದಾರೆ. ಐಟೆಮ್ ಹಾಡೆಂದು ಕರೆಯಬೇಡಿ ಅಂತ ಬೇರೆ ಉದ್ಗಾರ ಕೇಳಿಬರುತ್ತಿದೆ. ನಮ್ಮದು ಸ್ಪೆಷಲ್ ಸಾಂಗ್ ಅಂತ ಕರಿರಿ ಎಂದು ನಾಯಕಿಯರು ಹೇಳಿಕೊಳ್ಳುತ್ತಿದ್ದಾರೆ.
ನಾಯಕಿಯರು ಈಜುಡುಗೆ ತೊಡುವ ಕಾಲ ಇತ್ತು. ಈಗ ಅದು ಸ್ಕಿನ್ ಟೈಟ್ ಆಗಿ ಐಟೆಮ್ ಹಾಡಿಗೆ ಜಂಪ್ ಆಗಿದ್ದಾರೆ. ದಂಡುಪಾಳ್ಯ ಅಂತಹ ಸಿನೆಮಾದಲ್ಲಿ ಪೂಜಾ ಗಾಂಧಿ ಅವರೇ ಲೂಸಾದ ಕುಪ್ಪಸದೊಂದಿಗೆ ಕುಣಿದು ಕುಪ್ಪಳಿಸಲಿಲ್ಲವೇ.
ನಾಯಕಿಯರು ಉಡುಗೆಯನ್ನು ಬಿಚ್ಚಿದರೆ ಬ್ಯಾಂಕ್ ಬಾಲನ್ಸ್ ಬೆಚ್ಚಗೆ ಎಂಬ ನೀತಿ ಸಹ ಬರಬಹುದು. ಈಗಾಗಲೇ ಕಡಿಮೆ ಬಟ್ಟೆ ಹೆಚ್ಚು ಸಂಭಾವನೆ ಅಂತ ಇದ್ದೇ ಇದೆಯಲ್ಲ!
Follow us on Google News and stay updated with the latest!
-
Contact at support@indiaglitz.com
Comments